ಯುವನಿಧಿಗೆ ವಿದ್ಯಾರ್ಥಿಗಳ ದುರ್ಬಳಕೆ ಖಂಡನೀಯ: ಎಬಿವಿಪಿ ಉಡುಪಿ

ಜನವರಿ 12ರಂದು ಶಿವಮೊಗ್ಗದಲ್ಲಿ ನಡೆಯುವ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಚಾಲನೆಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಭಾಗವಹಿಸುವಂತೆ ಶಾಲಾ ಕಾಲೇಜಿನ ಆಡಳಿತ ಮಂಡಳಿಯ ಮೂಲಕ ಒತ್ತಡ ಹೇರುತ್ತಿರುವುದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ.

ನಿರುದ್ಯೋಗಿಗಳಿಗೆ ಸಹಕಾರವಾಗಿ ಆಯೋಜನೆಗೊಂಡಿರುವಂತಹ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟಿರುವಂಥದ್ದಲ್ಲ, ಹಾಗೆಯೇ ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ತೊಡಗಿಸಿ ಕೊಳ್ಳುವಂತೆ ಮಾಡುತ್ತಿರುವ ರಾಜ್ಯ ಸರ್ಕಾರದ ಉದ್ದೇಶವಾದರೂ ಏನು ?

ಜನವರಿ 12 ವಿವೇಕಾನಂದರ ಜಯಂತಿ, ಭಾರತ ದೇಶದ ಪ್ರೇರಣೆಯಾಗಿರುವಂತಹ ಸ್ವಾಮಿ ವಿವೇಕಾ ನಂದರು ಯುವಕರು ಎಂದಿಗೂ ಪರಾವಲಂಬಿಗಳಾಗದೆ ಪುರುಷ ಸಿಂಹ ರಾಗಿ ಬಾಳಬೇಕೆಂಬುದು ಹಾಗೆಯೇ ಈ ಮೂಲಕ ಯುವ ಸಮೂಹ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕೆಂದು ಸಾರಿದವರು ಅಂತಹ ಪುಣ್ಯಪುರುಷರ ಜನ್ಮದಿನದಂದು ಯುವ ಸಮಾಜವನ್ನು ನಿರ್ವೀರ್ಯರನ್ನಾಗಿ ಮಾಡುವ ಯೋಚನೆ ಸರ್ಕಾರಕ್ಕೆ ಇದೆಯೇ? ಆದ್ದರಿಂದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸೂಕ್ತ ವಾಗಿರದೆ ಹಾಗೂ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಪೂರ್ಣ ಆಕ್ಷೇಪಿಸುತ್ತದೆ.

 
 
 
 
 
 
 
 
 
 
 

Leave a Reply