ಶಹಬ್ಬಾಸ್ ಆಭರಣ ಜ್ಯುವೆಲ್ಲರ್ಸ್

ಉಪ್ಪಿನಂಗಡಿಯಲ್ಲಿ ಬಿಲ್ಡಿಂಗ್ ಒಂದರ ಮೇಲೆ ಆಭರಣ ಜ್ಯುವೆಲ್ಲರ್ಸ್ ಸಂಸ್ಥೆಯ ಜಾಹಿರಾತಿನ ಬೃಹತ್ ಗಾತ್ರದ ಹೋರ್ಡಿಂಗ್ ನೋಡಿದೆ.  ತುಂಬಾನೆ ಖುಷಿ ಅನಿಸಿ ಆ ಜಾಹೀರಾತನ್ನು ಮತ್ತೆ ಮತ್ತೆ  ನೋಡಬೇಕೆನಿಸಿತು.

ಹೆಸರಾಂತ ಕಂಪನಿಗಳ ಜಾಹಿರಾತಿನಲ್ಲಿ ಪ್ರಖ್ಯಾತ ಹೀರೋಗಳು, ದೊಡ್ಡ ಹೆಸರಿನ ಹೀರೋಯಿನ್ ಗಳು ಇರುವ ಈಗಿನ ಜಾಹೀರಾತಿನ ಜಾಗದಲ್ಲಿ ನಮ್ಮ ಕಂಬಳದ ಓಟಗಾರನ ಪೋಟೋ  ತಾನು ಪದಕ ಗೆದ್ದ ಕೋಣದ ಜೊತೆಗಿನ ಪೋಟೋ‌ ಹೋರ್ಡಿಂಗ್ ತುಂಬಾ ರಾರಾಜಿಸುತ್ತಿತ್ತು.‌

ಕೋಣದ ಕುತ್ತಿಗೆಯಲ್ಲಿ ಕಂಡ ಚಿನ್ನದ ಸರ, ಈ ಹಿಂದೆ ಕಂಬಳ ಬ್ಯಾನ್ ಆಗಬೇಕು ಅಂತ ಬಡ್ಕೊಂಡ ಪೇಟಾ ಸಂಸ್ಥೆಯ ಕೆನ್ನೆಗೆ ಬಡಿದ ಹಾಗಿದೆ. ನಮ್ಮ ಊರಲ್ಲಿ ಕೋಣಗಳನ್ನು ಎಷ್ಟು ಚೆನ್ನಾಗಿ ನೋಡ್ಕೊಳ್ತಾರೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?

ಇಂತಹ ಸ್ಥಳೀಯ ಹೀರೋಗಳನ್ನೊಳಗೊಂಡ, ಸ್ಥಳೀಯ ಜನಪದ ಕ್ರೀಡೆಯನ್ನು ಪ್ರತಿನಿಧಿಸುವ ಜಾಹಿರಾತುಗಳು ಇನ್ನೂ ಬರಲಿ… ಅಭಿನಂದನೆ ಆಭರಣ ಜ್ಯುವೆಲ್ಲರ್ಸ್

 
 
 
 
 
 
 
 
 
 
 

Leave a Reply