ಲಯನ್ಸ್ ಕ್ಲಬ್ ಬನ್ನಾಡಿ -ವಡ್ಡರ್ಸೆ ವರ್ತಿಯಿಂದ ಶಿಕ್ಷಕರ ದಿನಾಚರಣೆ


ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಆಶ್ರಯ ದಲ್ಲಿ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನ ದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾ ಯಿತು.

ಈ ಸಂದರ್ಭ ಹಿರಿಯ ನಿವೃತ್ತ ಶಿಕ್ಷಕರಾದ ಬನ್ನಾಡಿ ಶೇಖರ ಶೆಟ್ಟಿ ಹಾಗೂ ರಾಜ್ಯಮಟ್ಟ ದಲ್ಲಿ ಕ್ರೀಡಾ ಸಾಧನೆಗೈದ ವಡ್ಡರ್ಸೆ ಸರಕಾರಿ ಪ್ರೌಢ ಶಾಲಾ ಶಿಕ್ಷಕಿ ಗೀತಾ ಆನಂದ ಶೆಟ್ಟಿ ಯವರನ್ನು, ಲಯನ್ಸ್ ಕ್ಲಬ್ ತೆಕ್ಕಟ್ಟೆಯ ಸ್ಥಾಪಕಾಧ್ಯಕ್ಷರು, ರೀಜನ್ VII, ಝೋನ್ II ನ ಝೋನ್ ಚಯರ್ ಪರ್ಸನ್, ವಡ್ಡರ್ಸೆ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾ ಲಯನ್ ಕೆದೂರು ಸೀತಾರಾಮ ಶೆಟ್ಟಿ ಯವರು ಸನ್ಮಾನಿಸಿದರು.

ಲಯನ್ಸ್ ಕ್ಲಬ್ ಬನ್ನಾಡಿ ಇದರ ಕಾರ್ಯ ದರ್ಶಿ ಹಾಗೂ ನಿವೃತ್ತ ಉಪನ್ಯಾಸಕ ಲಯನ್ ಯಾಳಕ್ಲು ಚಂದ್ರಶೇಖರ್ ಶೆಟ್ಟಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ನಿವೃತ್ತ ಶಿಕ್ಷಕ ಹಾಗೂ ಲಯನ್ಸ್ ಕ್ಲಬ್ ಬೋರ್ಡ್ ಆಫ್ ಡೈರೆಕ್ಟರ್ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಮತ್ತು ನಿವೇದಿತಾ ಪ್ರೌಢ ಶಾಲೆ ಬಸ್ರೂರು ಇದರ ದೈಹಿಕ ಶಿಕ್ಷಕರು ಹಾಗೂ ಲಯನ್ಸ್ ಕ್ಲಬ್ ಎರಡನೇ ಉಪಾ ಧ್ಯಕ್ಷ ಲಯನ್ ಕಲ್ಕಟ್ಟೆ ರಾಜಾರಾಮ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು.

ಲಯನ್ ಬೋರ್ಡ್ ಆಫ್ ಡೈರೆಕ್ಟರ್ ಲಯನ್ ಪ್ರಭಾಕರ್ ಶೆಟ್ಟಿ ಪ್ರಾರ್ಥಿಸಿದರು. ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಬನ್ನಾಡಿ ಸೋಮನಾಥ್ ಹೆಗ್ಡೆ ಸ್ವಾಗತಿಸಿದರು. ಪಬ್ಲಿಕ್ ರಿಲೇಷನ್ ಆಫೀಸರ್ ಲಯನ್ ಕೊಮೆ ಸುರೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ ವಂದಿ ಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply