ಭಗವಂತನ ಪಾದ ಸೇರಿದ ಶ್ರೀ ಶ್ರೀ ಕೇಶವಾನಂದ ಭಾರತೀ ತೀರ್ಥ ಮಹಾ ಸ್ವಾಮಿಗಳು

ಮಠ ಸಂಸ್ಥಾನಗಳ ಭೂ ಸಂಪತ್ತನ್ನು ಸರಕಾರಗಳು ಸ್ವಾಧೀನ‌ಪಡಿಸಿಕೊಳ್ಳುವುದರ ವಿರುದ್ಧ ಏಕಾಂಗಿ ಕಾನೂನು ಹೋರಾಟ ನಡೆಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಜಯಿಸಿ ದೇಶದ ಕಾನೂನು ಪಠ್ಯದಲ್ಲಿ ಶಾಶ್ವತ ಸ್ಥಾನ ಪಡೆದ (ಎಡನೀರು ಭಾರತೀತೀರ್ಥ v/s ಕೇರಳ ಸರಕಾರ ಪ್ರಕರಣ ) ಧೀರ ಸನ್ಯಾಸಿ . ಈ ಮೂಲಕ ದೇಶದ ನೂರಾರು ಮಠಗಳ ಭೂಮಿ ಉಳಿಸಿಕೊಟ್ಟ ಪುಣ್ಯಾತ್ಮರು

ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮಿ ಶನಿವಾರ ಮಧ್ಯರಾತ್ರಿ 12.30ಕ್ಕೆ ದೈವಾದೀನರಾಗಿದ್ದಾರೆ.

ಕೆಲದಿನಗಳ ಹಿಂದಷ್ಟೇ ತಮ್ಮ 60ನೇ ಚಾತು ರ್ಮಾಸ ವ್ರತಾಚರಣೆಯನ್ನು ಶ್ರೀಗಳು ಸಮಾಪ್ತಿಗೊಳಿಸಿದ್ದರು

ಎಷ್ಟೇ ಸವಾಲು ಕಷ್ಟ ಎದುರಾದರೂ ಗಡಿ ನಾಡು ಕಾಸರಗೋಡಲ್ಲಿ ಕನ್ನಡ ಶಾಲೆ ಗಳನ್ನು ಸ್ಥಾಪಿಸಿ ದಶಕಗಳಿಂದ ಮುನ್ನಡೆಸಿ ಕೊಂಡು ಬಂದ ಕನ್ನಡ ಕಿಂಕರ. ಅದ್ಭುತ ಕಲಾಪ್ರೇಮಿ

ಕಲಾವಿದರ ಅದರಲ್ಲೂ ಯಕ್ಷಗಾನ‌ ಕಲಾವಿ ದರ ಬದುಕು ಬವಣೆಗಳಿಗೆ ಇನ್ನಿಲ್ಲದಂತೆ ಸ್ಪಂದಿಸಿದ ಅನನ್ಯ ಉದಾರಿ.

ಯಕ್ಷಗಾನ ಮೇಳಕಟ್ಟಿ ಕೇವಲ‌ ಪೌರಾಣಿಕ ಪ್ರಸಂಗ ಪ್ರದರ್ಶನಗಳ ಮೂಲಕ ನೆಲದ ಮೌಲ್ಯ ಉಳಿಸಲು ಟೊಂಕ ಕಟ್ಟಿದ ಕಲಾ ತಪಸ್ವಿ

ಸ್ವಯಂ ಭಾಗವತರು, ಸಂಗೀತ ಕಲಾವಿದರು ಶ್ರೀ ಸಂತಾನ ಗೋಪಾಲಕೃಷ್ಣ ದಕ್ಷಿಣಾ ಮೂರ್ತಿ ಯ ಶ್ರದ್ಧೆಯ ಆರಾಧಕರು

ಶ್ರೀ ಶ್ರೀ ಕೇಶವಾನಂದ ಭಾರತೀತೀರ್ಥ ಮಹಾಸ್ವಾಮಿಗಳೇ …ಈ ಎಲ್ಲ ಕಾರ್ಯ ಸಾಧನೆಗಳನ್ನು ದಾಖಲಿಸಿ ಇಹದ ಯಾತ್ರೆ ಮುಗಿಸಿ ತೆರಳಿದಿರಾ.

ತಮ್ಮ ಚರಣಕಮಲಗಳಿಗಿದೋ ಅನಂತ ನಮನ ಶಾಂತಿಃ….

✍️ *ಜಿ ವಾಸುದೇವ ಭಟ್ ಪೆರಂಪಳ್ಳಿ*

 
 
 
 
 
 
 
 
 

Leave a Reply