ಧನಾತ್ಮಕ ಒತ್ತಡಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ~ – ಪ್ರೊ.ರಾಮನಾರಾಯಣ್

ಜೀವನದಲ್ಲಿ ಎರಡು ರೀತಿಯ ಒತ್ತಡಗಳಿಗೆ ಒಳಗಾಗುತ್ತೇವೆ. ಒಂದು ಧನಾತ್ಮಕ ಒತ್ತಡ. ಇನ್ನೊಂದು ಋಣಾತ್ಮಕ ಒತ್ತಡ. ಒತ್ತಡಗಳ ನಿರ್ವಹಣೆಯನ್ನು ಕಲಿತುಕೊಳ್ಳಿ. ಧನಾತ್ಮಕ ಒತ್ತಡಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಕುಗ್ಗಿಸುವಂತಹ ನೇತ್ಯಾತ್ಮಕ ಒತ್ತಡಗಳಿಂದ ಮುಕ್ತರಾಗಲು ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು’ ಎಂದು ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ರಾಮನಾರಾಯಣ್ ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಶ್ರೀಯುತರು ಮಾತನಾಡಿ, ‘ನಿಮ್ಮ ತಪುö್ಪಗಳಿಂದ ಕಲಿಯಿರಿ, ಸೋಲಿನಿಂದ ಕುಗ್ಗಿ ಹೋಗದೆ ಅದು ಕಲಿಸುವ ಪಾಠಗಳನ್ನು ಚೆನ್ನಾಗಿ ಅರಿತುಕೊಳ್ಳಿ.
ನಿಮ್ಮನ್ನು ನೀವು ತಿದ್ದಿ ತೀಡಿಕೊಳ್ಳಿ. ಗೆಲುವು ಎಂದರೆ ನೀವು ಇಷ್ಟಪಡುವ ವಿಷಯಗಳಲ್ಲಿ ಸಮಯವನ್ನು ಕಳೆಯುವ ಸಾಮರ್ಥ್ಯ. ಯಾರೊಂದಿಗೂ ಸ್ಪರ್ಧೆಗೆ ಇಳಿಯದೇ ನಿಮ್ಮನ್ನು ನೀವು ಸಾಣೆಗೆ ಹಚ್ಚಿಕೊಂಡು ನಿಮ್ಮಲ್ಲಿರುವ ಗುಣ ವಿಶೇಷಣಗಳನ್ನು ಬಲಪಡಿಸಿಕೊಳ್ಳಿ. 
 
ಉನ್ನತ ಸ್ಥಾನ ಪಡೆಯುವ ಧಾವಂತ ಇಲ್ಲದೆ ಪರರಿಗಾಗಿ ನಿಮ್ಮ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಿ. ನೀವು ನೀವಾಗಿಯೇ ಇರಿ. ಉಳಿದವರಿಂದ ಜ್ಞಾನ ಸಂಪಾದಿಸಿ. ಆದರೆ ಅದನ್ನು ನಕಲು ಮಾಡಲು ಹೋಗಬೇಡಿ. ಸಕಾರಾತ್ಮಕ ಚಿಂತನೆ, ಜೀವನಕ್ರಮ ನಮ್ಮದಾಗಿದ್ದಲ್ಲಿ ಬದುಕು ಒಳ್ಳೆಯದಾಗಲು ಸಹಾಯ ವಾಗುತ್ತದೆ’ ಎಂದು ಕರೆ ನೀಡಿದರು.

ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶೈಕ್ಷಣಿಕ ಸಾಧಕರಿಗೆ ನಗದು ಬಹುಮಾನ ನೀಡಿ ಆಶೀರ್ವಚಿಸುತ್ತಾ, ‘ನಾವು ಯಾವುದನ್ನು ಕೇಳ್ತೇವೋ, ಯಾವುದನ್ನು ನೋಡುತ್ತೇವೋ, ಯಾವುದನ್ನು ಅನುಭವಿಸುತ್ತೇವೋ ಅವುಗಳೇ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. 
 
ಸಾತ್ವಿಕ ವಿಚಾರ, ಸಾತ್ವಿಕ ಆಹಾರ ಸೇವನೆಯಿಂದ ಮನಸ್ಸು ಶುದ್ಧಿಯಾಗಿಟ್ಟುಕೊಳ್ಳಬೇಕು’ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಖ್ಯಾತ ವೈದ್ಯ ಡಾ| ಶಶಿಕಿರಣ್ ಉಮಾಕಾಂತ್ ಮಾತನಾಡಿ, ‘ತಿಳಿದ ವಿಷಯವನ್ನು ತಿಳಿಸಲು ವಿಸ್ತಾರವಾಗಿ ವಿವರಣೆ ನೀಡುವುದಕ್ಕಿಂತ ಸತ್ವ-ಸಾರವನ್ನು ತಿಳಿಸಿ ಮನಸ್ಸಿನ ಬಾಗಿಲುಗಳನ್ನು ತೆರೆಸಬೇಕು, ಯಾವುದೇ ಕೆಲಸ ಕಾರ್ಯಗಳಲ್ಲಿ ಉತ್ಕ್ರುಷ್ಟತೆ ಬೇಕು. ಇದಕ್ಕೆ ಆಳವಾದ ಯೋಚನೆ, ಚಿಂತನೆ, ಸೂಕ್ಷ÷್ಮಪ್ರಜ್ಞೆ, ಅವಲೋಕನ ಅತ್ಯಗತ್ಯ’ ಎಂದರು.

ಕಾಲೇಜಿನ ಪ್ರಾಂಶುಪಾಲೆ ಪ್ರತಿಮಾ ಬಾಳಿಗಾ ವಾರ್ಷಿಕ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಿತಿಕಾ ಭಕ್ತ ವಿದ್ಯಾರ್ಥಿ ಸಂಘದ ವರದಿ, ಕ್ರೀಡಾ ಕಾರ್ಯದರ್ಶಿ ಆಂಜೆಲಿನ್ ಲೆವಿಸ್ ಕ್ರೀಡಾ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ, ರಾಷ್ಟಮಟ್ಟದ ಸಾಂಸ್ಕೃತಿಕ, ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ, ಲೆಕ್ಕಪರಿಶೋಧಕ ಸಿಎ ಟಿ.ಪ್ರಶಾಂತ್ ಹೊಳ್ಳ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ವೀಣಾ ಜಿ ಪ್ರಭು, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.


ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನುಶ್ ಶೆಣೈ ಸ್ವಾಗತಿಸಿದರು. ಉಪನ್ಯಾಸಕಿ ಸುಧಾ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಆಶ್ಲೆ ಮೆಲ್‌ರಾಯ್ ಫೆರ್ನಾಂಡಿಸ್   ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
 
 
 
 
 
 
 
 
 
 
 

Leave a Reply