ಕೈ ತೋಟ ಮತ್ತು ತಾರಸಿ ಕೃಷಿ ಉಚಿತ ಮಾಹಿತಿ ಶಿಬಿರ

ಮಣಿಪಾಲ ಆಗಸ್ಟ್ 11 : ಭಾರತೀಯ ವಿಕಾಸ ಟ್ರಸ್ಟ್-ಮಣಿಪಾಲ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಛೇರಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೈತೋಟ ಮತ್ತು ತಾರಸಿ ತೋಟದ ಉಚಿತ ಮಾಹಿತಿ ಶಿಬಿರವನ್ನು ಬುಧವಾರ ದಿನಾಂಕ 18.08.2021 ರಂದು ಭಾರತೀಯ ವಿಕಾಸ ಟ್ರಸ್ಟ್ (ಪೆರಂಪಳ್ಳಿ ರಸ್ತೆ) ಮಣಿಪಾಲ ದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವು ಬೆಳಿಗ್ಗೆ 10.00 ರಿಂದ ಪ್ರಾರಂಭವಾಗಲಿದ್ದು , ಇದರಲ್ಲಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕೈ ತೋಟ ಮತ್ತು ತಾರಸಿ ಕೃಷಿಯ ಪ್ರಾಮುಖ್ಯತೆ, ತರಕಾರಿ ಬೆಳೆಗಳು, ಮಣ್ಣಿನ ಫಲವತ್ತತೆ ಕಾಯ್ದು ಕೊಳ್ಳುವ ವಿಧಾನ, ಸಾವಯವ ಗೊಬ್ಬರದ ತಯಾರಿ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡುವರು.

ಇದೇ ಸಂದರ್ಭದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇವರು ಕೊಡ ಮಾಡಿರುವ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಲಾಗುತ್ತದೆ.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ಸೂರ್ಯನಾರಾಯಣ ರಾವ್ ಇವರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಬ್ರಹ್ಮಾವರ ಕೃಷಿ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ ಮತ್ತು ಹಿರಿಯ ವಿಜ್ಞಾನಿ ಡಾ ಚೈತನ್ಯ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಉಪಸ್ಥಿತರಿರುವರು.

ಈ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ನಾಗರಿಕರು ದಿನಾಂಕ 18.8.2021 ಬುಧವಾರದಂದು ಭಾರತೀಯ ವಿಕಾಸ ಟ್ರಸ್ಟಿನ ಸಭಾಂಗಣದಲ್ಲಿ ಮುಂಜಾನೆ 10.00 ಗಂಟೆಗೆ ಹಾಜರಿರಬೇಕಾಗಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಸಂಸ್ಥೆಯ ವಿಳಾಸ ಈ ಕೆಳಗಿನಂತಿದೆ.

ಭಾರತೀಯ ವಿಕಾಸ ಟ್ರಸ್ಟ್,“ಅನಂತ,”ಪೆರಂಪಳ್ಳಿ, ಮಣಿಪಾಲ – ಅಂಬಾಗಿಲು ರಸ್ತೆ, ಉಡುಪಿ- 576102, ದೂರ ವಾಣಿ ಸಂಖ್ಯೆ : (0820-2570263).

 
 
 
 
 
 
 
 
 
 
 

Leave a Reply