ಅಭಿವಿನ್ಯಾಸ ಕಾರ್ಯಕ್ರಮ

ಉಡುಪಿ: ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಅಭಿವಿನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮವನ್ನು
ಟ್ಯಾಪ್‌ಮಿ ಯ ಸಹಪ್ರಾಧ್ಯಾಪಕರು ಹಾಗೂ ಡೀನ್ (ನಿರ್ವಹಣೆ) ಆಗಿರುವ ಡಾ| ಕೃಷ್ಣ ಪ್ರಸಾದರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಅವರು ನೂತನ ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಜ್ಞಾನದೊಂದಿಗೆ
ಕೌಶಲಗಳನ್ನು ಬಳಸಿ ಹೇಗೆ ಔಚಿತ್ಯ ಪೂರ್ಣವಾಗಿ ಅಧ್ಯಯನ ಮಾಡಬಹುದು ಹಾಗೂ ಅವುಗಳನ್ನು ಹೇಗೆ ಸಾರ್ಥಕಗೊಳಿಸಬಹುದೆಂದು ಉದಾಹರಣೆಗಳೊಂದಿಗೆ
ಅರ್ಥೈಸಿದರು.

ಪ್ರಾoಶುಪಾಲ ಡಾ| ಭಾಸ್ಕರ ಶೆಟ್ಟಿ ಎಸ್. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿನಿಯರು ಕಾಲೇಜಿನ ವಿವಿಧ ಸೌಲಭ್ಯಗಳನ್ನು ಸದುಪಯೋಗ ಮಾಡಿ ಕಾಲೇಜಿಗೆ
ಕೀರ್ತಿತರಬೇಕಾಗಿ ಹಾರೈಸಿದರು. ವಾಣಿಜ್ಯಶಾಸ್ತ್ರ ಶಾಸ್ತ್ರ (ಎಂ.ಕಾo.) ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಡಾ| ಉಮೇಶ ಮಯ್ಯರು ಕಾರ್ಯಕ್ರಮವನ್ನು ಸಂಯೋಜಿಸಿದರು. ಸ್ನಾತಕೋತ್ತರ ವಿಭಾಗಗಳ ಸಂಚಾಲಕರಾದ ಡಾ| ಶ್ರೀಧರಪ್ರಸಾದ ಕೆ. ಇವರು ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ| ವಾಣಿ ಆರ್ ಬಲ್ಲಾಳರು ಅತಿಥಿಗಳನ್ನು ಪರಿಚಯಿಸಿದರು. ಎಂ.ಎ ರಾಜ್ಯಶಾಸ್ತç ವಿಭಾಗದ
ಸಂಚಾಲಕರಾದ ಪ್ರೊ| ಅಶೋಕ ಭಂಡಾರಿಯವರು ವoದನಾರ್ಪಣೆಗೈದರು. ಸಭೆಯಲ್ಲಿ ಐಕ್ಯೂಸಿಯ ಸಂಚಾಲಕರಾದ ಪ್ರೊ| ಸೋಜನ್ ಕೆ.ಜಿ., ಡಾ| ರಾಮದಾಸ ಪ್ರಭು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply