ಹೆಣ್ಣು ಸಂಸಾರದ ಕಣ್ಣು~ ಫಕೀರಗೌಡ ಹಳೆಮನಿ

ಹೆಣ್ಣು ಸಂಸಾರದ ಕಣ್ಣು…

ಜನ್ಮವಿತ್ತ ಪ್ರಥಮ ರತ್ನ ಈ ಮಹಾತಾಯಿ,

,ಧರೆಗಿಳಿದು ಧನಿದವರ ಕಣ್ಣು ಒರೆಸಿದ ಜನನಿ,,

ತನ್ನೊಳಗಿನ ತಾಯಿತನದ ಗರ್ಭದಲ್ಲಿ ಕಂದನ ಕಾಪಾಡಿದ ಕರುಣಾಮಯಿ ,

ಶ್ರಮ ವಹಿಸುವ ಸೂರ್ಯ-ಚಂದ್ರರ ವ್ಯಕ್ತಿತ್ವದ ಕೈಗನ್ನಡಿ,

ಅಮ್ಮ ಅನ್ನೋ ಅಕ್ಷರದ ಮುಗ್ಧಮನದ ಸಿರಿವಂತಿಕೆಯ ಸುರಿಸಿದಾಕೆ,

ಎದೆಹಾಲಿನ ಅಮೃತವ ಉಣಿಸಿದ ಮನೆಯ ಮಮಕಾರದ ವಾತ್ಸಲ್ಯದ ಮನಸ್ವಿನಿ ,

ಅಕ್ಷರ, ಅಕ್ಕರೆಯ ಬಿತ್ತಿದ ಗುರುಮಾತೆ ,

ಪ್ರಕೃತಿಯ ಸಂತಾನವ ಬೆಳೆಸಿದಾಕೆ ಜನ್ಮದಾತೆ,

ಒಳಗಿನ ಕಣ್ಣು ತೆರೆಯುವಂತೆ ಮನದಿ ಉಳಿದ ಮಡದಿ,

ಮಮತೆಯ ಮಾತೆಯಾಗಿ ಕೈಯ ಸಿರಿತನದ ಮಡದಿಯಾಗಿ,

ಸೌಹಾರ್ದತೆಯ ಸಹೋದರತ್ವದ ಸಹೋದರಿಯಾಗಿ ,

ಅಪ್ಪ ಎಂದು ಕೂಗುವ ಆತ್ಮ ಬಿಂದುವಿನ ಪುತ್ರಿಯಾಗಿ,

ತಾಯಿತನದ ತಾಳ್ಮೆಯ ತoಗಾಳಿಯಾಗಿ,

ಕಾಯಕ ಯೋಗದ ಸಂಚಾಲಕಿಯಾಗಿ,

ಪಡುಗಡಲ ಪೊಡವಿಗಾಗಿ, ಮೂಡಲ ದ ಮಂದಾರ ವಾಗಿ,

ಕರುಣೆ ತೋರುವ ತರುಣಿಯಾಗಿ,

ಪ್ರೇಮಾಂಕುರದ ಪ್ರೇಮ ಕಾವ್ಯವಾಗಿ,
ಅಪರಾಧ ತಿದ್ದುವ ನ್ಯಾಯ ದೇವತೆಯಾಗಿ,

ಒಡಲಿಗೆ ಅನ್ನ ಹಾಕುವ ಅನ್ನಪೂರ್ಣೇಶ್ವರಿಯಾಗಿ,

ನಗುವಾಗಿ , ಗೆಲುವಾಗಿ, ಸಾಧಿಸುವವನಿಗೆ ಮೆಟ್ಟಿಲಾಗಿ,

ಪುರುಷನ ಹಿಂಬಾಲಿಸುವ ನೆರಳಾಗಿ , ಚೆಲುವಾಗಿ, ಬದುಕಾಗಿ, ಎಲ್ಲರಿಗೂ ಬೇಕಾಗಿ,

ತನುವಾಗಿ ತನ್ಮಯಳಾಗಿ,
ಪಟ್ಟದ ರಾಣಿಯಾಗಿ,
ಯುದ್ಧಭೂಮಿಯ ಸಮರಾಗ್ನಿಯಾಗಿ,
ಜಯ ವಿಜಯದ ಘೋಷಗಳ ಜಯದ ಭಾಮಿನಿ ಯಾಗಿ,
ರೋಗಕ್ಕೆ ಮದ್ದಾಗಿ, ರಾಗಕ್ಕೆ ಸ್ವರವಾಗಿ,
ಚಿತ್ರಗಾರನ ಕುಂಚ ವಾಗಿ ಬಣ್ಣಗಳ ಜೊತೆ ಸೇರಿದ ಕಾಮನ ಬಿಲ್ಲಾಗಿ ,
ತೇಲುವ ತಂಪಾದ ಚಂದ್ರನ ಬೆಳದಿಂಗಳಾಗಿ,

ಸಾಗರವಾಗಿ, ಸಂಸಕೃತಿಯ ಸಾಕಾರವಾಗಿ,

ಪೂಜಿಸುವ ಪ್ರಕೃತಿಯಾಗಿ ಚಿಗುರೊಡೆಯಲು ಚಿಗುರಾಗಿ,
ಅರಳುವ ಪುಷ್ಪವಾಗಿ, ಪತಿಗೆ ಸತಿಯಾಗಿ,

ಮಗುವಿಗೆ ನಗುವಾಗಿ, ವೃದ್ಧರಿಗೆ ಬಂದುಬಾಗಿ. ಭಾಷೆ ವೇಷಭೂಷಣದ ಸಂಕಲನವಾಗಿ,
ಜನನಿಯ ಗರ್ಭದಿಂದ ಜನ್ಮಭೂಮಿಯ ಭೂಗರ್ಭ ಕ್ಕೆ ಸಾರಥಿಯಾಗಿ,

ಸಿರಿ ಸಂಪತ್ತಾಗಿ, ಆಯುಷ್ಯ, ಆರೋಗ್ಯ, ಐಶ್ವರ್ಯ ವಾಗಿ, ಕಾಣುವ ನಿಸರ್ಗದ ಸ್ವರ್ಗವಾಗಿ, ಅಕ್ಷರ ಸಿರಿಯ ಸರಸ್ವತಿಯಾಗಿ,
ಪಾಪಆತ್ಮರ ಸಂಹರಿಸುವ ದುರ್ಗಿಯಾಗಿ,

ವಿಸ್ತರಿಸಲು ವರ್ಣಿಸಲು ಪದಗಳು ಸಾಲದಾಗಿ,

,ತನ್ನ ಒಳಗೆ ತಾನಾಗಿ ಎಲ್ಲರೊಳಗೆ ಬೇರಾಗಿ,
ಮರಕ್ಕೆ ಆಸರೆ ಮಣ್ಣೊಳಗೆ ಮೌನವಾಗಿ ಇದ್ದರೂ,

ಜಗಕೆ ಕಾಣದಂತೆ ಇರುವ ಹೆಣ್ಣು ಸಂಸಾರದ ಕಣ್ಣು,

ಫಕೀರಗೌಡ ಹಳೆಮನಿಭಾರತ ಸೇವಾದಳ ಜಿಲ್ಲಾ ಸಂಘಟಕರು ಉಡುಪಿ.

 
 
 
 
 
 
 
 
 
 
 

Leave a Reply