ಜನಪದ ಸರಣಿ ಕಲಾ ಕಾರ್ಯಾಗಾರದ ಏಳನೇ ಆವೃತ್ತಿ

ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿಯ ವೆಂಟನಾ ಪೌಂಡೇಶನ್‌ನ ಸಹಯೋಗದಲ್ಲಿ ಆಯೋಜಿಸುವ ಜನಪದ ಸರಣಿ ಕಲಾ ಕಾರ್ಯಾಗಾರದ ಏಳನೇ ಆವೃತ್ತಿಯು 14ನೇ ಅಕ್ಟೋಬರ್ ಶನಿವಾರದಂದು ಬೆಳಿಗ್ಗೆ 9ಗoಟೆಗೆ ವೆಂಟನಾ ಪೌಂಡೇಶನ್‌ನ ಟ್ರಸ್ಟಿಗಳಾದ ಶಿಲ್ಪಾ ಭಟ್‌ರವರಿಂದ ಉದ್ಘಾಟನೆಗೊಳ್ಳಲಿದೆ. 
ಮುಖ್ಯ ಅತಿಥಿಗಳಾಗಿ ವೈಟ್ ಲೋಟಸ್ ಹೋಟೆಲ್‌ನ ಆಡಳಿತ ನಿರ್ದೇಶಕರಾದ ಅಜಯ್ ಪಿ. ಶೆಟ್ಟಿಯವರು ಭಾಗವಹಿಸಲಿದ್ದು ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್‌ರವರು ಉಪಸ್ಥಿತರಿರಲಿದ್ದಾರೆ.
ಈ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಕೇರಳದ ಭಿತ್ತಿಚಿತ್ರ ಕಲೆಯನ್ನು ಈ ಬಾರಿ ಪರಿಚಯಿ ಸುತ್ತಿದ್ದು, ತ್ರಿಶೂರ್‌ನ ವೇಣುಗೋಪಾಲ್ ಟಿ.ಕೆ.ಯವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. 14ನೇ ಶನಿವಾರ ಮತ್ತು 15ನೇ ಭಾನುವಾರ ಎರಡು ವಿಭಾಗಗಳಲ್ಲಿ ಈ ಕಾರ್ಯಾಗಾರವು ಬಡಗು  ಪೇಟೆಯ ಹತ್ತು ಮೂರು ಇಪ್ಪಂತ್ತೆ೦ಟು ಗ್ಯಾಲರಿಯಲ್ಲಿ ನಡೆಯಲಿದೆ.
ಇದರ ಸಂದರ್ಭದಲ್ಲಿ ಕೇರಳ ಮ್ಯೂರಲ್ ಚಿತ್ರಗಳ ಕಲಾಪ್ರದರ್ಶನವನ್ನೂ ಏರ್ಪಡಿಸಿದ್ದು, ಎರ್ನಾಕು ಲಂನ ಅಶ್ವತಿ ಎನ್. ಹಾಗೂ ವೇಣುಗೋಪಾಲ್‌ರವರ ಸುಮಾರು ೧೫ ಜಲವರ್ಣ ಮತ್ತು ಆಕ್ರಿಲಿಕ್ ಮಾಧ್ಯಮದ ಕಲಾಕೃತಿಗಳ ಪ್ರದರ್ಶನವು 13ರಿಂದ 15ರ ತನಕ ಅಪರಾಹ್ನ3ರಿಂದ 7ರ ತನಕ ಪ್ರದರ್ಶನಕ್ಕಿರಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ(೯೮೪೫೬೫೦೫೪೪) ಯವರನ್ನು ಸಂಪರ್ಕಿಸಬಹುದು.
 
 
 
 
 
 
 
 
 
 
 

Leave a Reply