Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮ

ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರ ದ ಶ್ರೀ ಕೃಷ್ಣ ಸ್ವಾಮಿ ಜೋಯಿಸ್ ಅವರನ್ನು ದಿನಾಂಕ 23/09/2022 ರಂದು ಅವರ ನಿವಾಸದಲ್ಲಿ ಗೌರವಿಸಲಾಯಿತು, ಯಕ್ಷಗಾನ ಪ್ರಸಾದನ, ಮದ್ದಳೆ, ಭಾಗವತಿಕೆ, ಹಾಗೂ ಮಣ್ಣಿನಿಂದ ಗಣಪತಿ ಹಾಗೂ ಇತರ ದೇವರುಗಳ ವಿಗ್ರಹಗಳನ್ನು ತಯಾರಿಸುವ ಜೋಯಿಸರ ಕಲಾ ಪ್ರೌಢಿಮೆ ಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು,ಈ ಕಾರ್ಯಕ್ರಮದಲ್ಲಿ ಶಾಂತಿಮತೀ ಪ್ರತಿಷ್ಠಾನ ದ ಅಧ್ಯಕ್ಷರಾದ ಚಂದ್ರಶೇಖರ ಅಡಿಗಳು ಹಾಗೂ ಖ್ಯಾತ ಛಾಯಾಗ್ರಾಹಕ ಶ್ರೀ ನಾಗರಾಜ ವಾರಂಬಳ್ಳಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಯುತರು ಯಕ್ಷಗಾನದಲ್ಲಿ ಕಾಳಿಂಗ ನಾವಡರ ಒಡನಾಟ, ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ, ಹಾಗೂ ಪರಂಪರಾಗತವಾಗಿ ಬಂದ ಮಣ್ಣಿನ ವಿಗ್ರಹ ರಚನೆಯ ಅನುಭವವನ್ನು ಹಂಚಿಕೊಂಡರು , ಶ್ರೀ ನಾಗರಾಜ ವಾರಂಬಳ್ಳಿ ಹಾಗೂ ಮಟ್ಪಾಡಿ ಶಾಲೆಯ ಪ್ರಾಧ್ಯಾಪಕ ಹರಿಕೃಷ್ಣ ಹೊಳ್ಳರು ಶುಭಾಶಂಸನೆ ಗೈದರು, ಪ್ರಸನ್ನ ಭಟ್ ಸ್ವಾಗತಿಸಿ ವಿದ್ವಾನ್ ಡಾ. ವಿಜಯ ಮಂಜರ್ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷರಾದ ಚಂದ್ರಶೇಖರ ಅಡಿಗಳು ಧನ್ಯವಾದ ಸಮರ್ಪಣೆಗೈದು ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!