ಅಂಬೇಡ್ಕರ್ ಹಿಂದುತ್ವದ ಸಂರಕ್ಷಕ – ವಿಜಯ್ ಕೊಡವೂರು

ಉಡುಪಿ: ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿ ಕೊಡವೂರು ವಾರ್ಡಿನ ದಿವ್ಯಾಂಗ ರಕ್ಷಣಾ ಸಮಿತಿ ಮತ್ತು ಸ್ನೇಹಿತ ಯುವ ಸಂಘದ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯಿತು.

 ಕಾರ್ಯಕ್ರಮ ಆಯೋಜನೆ ಮಾಡಿದ ಕೊಡವೂರು ವಾರ್ಡಿನ ನಗರ ಸಭಾ ಸದಸ್ಯ ಕೆ ವಿಜಯ್ ಕೊಡವೂರು ಮಾತನಾಡಿ ಅಂಬೇಡ್ಕರ್ ಎಂದರೆ ಕೆಲಸ ಸಿಗದ ವಿದ್ಯಾವಂತರು ಬೇಸರದಿಂದ ನೋಡುತ್ತಾರೆ,ಮೀಸಲಾತಿಯಿಂದ ಕೆಲಸ ತಪ್ಪಿ ಹೋಗಿದೆ ಎನ್ನುತ್ತಾರೆ.ಅದರಿಂದ ಅಂಬೇಡ್ಕರರನ್ನು ಒಪ್ಪುದಿಲ್ಲ ಇದು ನಮ್ಮ ತಪ್ಪು ಕಲ್ಪನೆ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ ಎಂದರು.ದೀನ ದುಃಖಿತರ ಸಮಾಜವನ್ನು ಸಮಾನತೆಗೆ ತರಬೇಕೆಂದು ಅಲ್ಪಾವಧಿಯ ಮೀಸಲಾತಿಯನ್ನು ತಂದರು. ಅದನ್ನು ರಾಜಕೀಯ ಲಾಭಕ್ಕಾಗಿ ದೀರ್ಘವತಿಯ ಮೀಸಲಾತಿ ಮಾಡಿದರು ಇದರಲ್ಲಿ ಅಂಬೇಡ್ಕರ್ ತಪ್ಪೇನು?ಅಂಬೇಡ್ಕರ್ ಹಿಂದುತ್ವದ ಸಂರಕ್ಷಕ ಸಂವಿಧಾನದ ಪುಸ್ತಕದಲ್ಲಿ ವೇದ ಉಪನಿಷತ್ ಗಳ ಸಂಸ್ಕೃತಗಳ ವಾಕ್ಯ ರಾಮ,ಕೃಷ್ಣ,ಹನುಮಂತ ದೇವರುಗಳ ಚಿತ್ರಗಳಿಂದ ಪ್ರಕಟವಾಗಿದೆ.ಜಾತಿಯ ತಾರತಮ್ಯದಿಂದ ನೋವು ಆದರೂ ದ್ವೇಷದ ಭಾವನೆಯಿಂದ ನೋಡಿಲ್ಲ, ನಮ್ಮಲ್ಲಿ ಒಂದೇ ದೇವರು ನಮ್ಮ ಮತಕ್ಕೆ ಪರಿವರ್ತನೆ ಆಗಿ ಎಂದು ಮುಸ್ಲಿಂ ಕ್ರೈಸ್ತ ರು ಒತ್ತಾಯ ಮಾಡಿದರು.

ತಮ್ಮ ಮೂಲ ಸಂಸ್ಕೃತಿ ಮತ್ತು ಹಿಂದುತ್ವ ಬಿಡುವುದಿಲ್ಲ ಎಂದು ಹಿಂದುತ್ವದ ಶಾಕೆಯಾದ ಬೌದ್ಧ ಧರ್ಮವನ್ನು ಒಪ್ಪಿಕೊಂಡು ಹಿಂದೂ ಧರ್ಮವನ್ನು ಸಂರಕ್ಷಣೆ ಮಾಡಿದರು ಎಂದು ವಿಜಯ್ ಕೊಡವೂರು ಹೇಳಿದರು.

ಸ್ನೇಹಿತ ಯುವ ಸಂಘ ದ ಅಧ್ಯಕ್ಷ ವಿವೇಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಜಯಂತ್ ಮಲ್ಪೆ ,ದಿನೇಶ್ ಪುತ್ರನ್, ಇನ್ನಿತರರು ಉಪಸ್ಥಿತರಿದ್ದರು.ರಾಜೇಶ್ ಕಾನಂಗಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply