Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಉಡುಪಿ: ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ ಮಹಾಸಭೆ

ಉಡುಪಿ: ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಉಡುಪಿ ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 22 ರಂದು ಮಧ್ಯಾಹ್ನ ಉಡುಪಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಿತು.

ಸೊಸೈಟಿಯ ಅಧ್ಯಕ್ಷರಾದ ಅಕ್ಬರ್ ಅಲಿ ಉಡುಪಿ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಆರೀಫ್ ಕಾಶಿಮ್ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು. ಉಪಾಧ್ಯಕ್ಷರಾದ ಸಲಾಹುದ್ದೀನ್ ಸಾಹೆಬ್ ಲೆಕ್ಕ ಪರಿಶೋಧಕರ ನೇಮಕ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ದೇಶಕರಾದ ಅನ್ವರ್ ಅಲಿ ಕಾಪು 2021-22 ಸಾಲಿನ ವಾರ್ಷಿಕ ವರದಿಯನ್ನು ಓದಿ ದಾಖಲಿಸಿದರು. ಇನ್ನೋರ್ವ ನಿರ್ದೇಶಕರಾದ ಮುಹಮ್ಮದ್ ಇಕ್ಬಾಲ್ ಕಾಪು 2022-23 ಸಾಲಿನ ಅಂದಾಜು ಆಯವ್ಯಯ ಪತ್ರದ ಮಂಡನೆ ಮಾಡಿದರು. ಸದಸ್ಯರಾದ ಮುಹಮ್ಮದ್ ಶಾರುಕ್ ಮಹಾಸಭೆಯ ಆಮಂತ್ರಣ ಪತ್ರಿಕೆ ಓದಿ ದಾಖಲಿಸಿದರು.

ಆರಂಭದಲ್ಲಿ ಸದಸ್ಯರಾದ ಮೌಲಾನಾ ದಾನಿಶ್ ಪ್ರಾರ್ಥನೆ ನೆರವೇರಿಸಿದರು. ನಿರ್ದೇಶಕ ನಿಸಾರ್ ಅಹ್ಮದ್ ಸ್ವಾಗತಿಸಿದರು. ಕೊನೆಯಲ್ಲಿ ನಿರ್ದೇಶಕರಾದ ರಿಯಾಝ್ ಅಹ್ಮದ್ ಧನ್ಯವಾದವಿತ್ತರು. ನಿರ್ದೇಶಕ ಜಿ.ಎಂ. ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!