ಕುಂಜೂರಿನಲ್ಲಿ ಶರನ್ನವರಾತ್ರಿ ರಮೋತ್ಸವ

ಕುಂಜೂರಿನ ಶ್ರೀದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ರಮೋತ್ಸವವು ಅ.26 ರಿಂದ ನ.4 ರ ಪರ್ಯಂತ ವೈಭವದಲ್ಲಿ ನೆರವೇರಲಿದೆ.

ಪ್ರತಿದಿನ ಉಷಃಕಾಲ ಪೂಜೆಯೊಂದಿಗೆ ಆರಂಭಗೊಂಡು ಚಂಡಿಕಾಯಾಗ ಹಾಗೂ ದುರ್ಗಾ ಹೋಮ,ಲಕ್ಷ್ಮೀ ಹೃದಯ ಹೋಮ,ಶ್ರೀಸೂಕ್ತ ಹೋಮ ಸಹಿತ ವಿವಿಧ ದುರ್ಗಾ ಹೋಮಗಳು,ವಾಯನ ದಾನ- ಕನ್ನಿಕಾ ಪೂಜೆಗಳು ಒಂಬತ್ತು ದಿನಗಳಲ್ಲೂ ನಡೆಯುವುದು .ಮಧ್ಯಾಹ್ನ ಅಲಂಕಾರ ಪೂಜೆ, ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ.ಸಂಜೆ : ದೀಪಾರಾಧನೆ,ಗಣಪತಿ ರಂಗಪೂಜೆ,ಹೂವಿನ ಪೂಜೆ,ನವರಾತ್ರಿ ಪೂಜೆಗಳು ನಡೆಯುವುದು.ಮಹಾನವಮಿಯಂದು ಸಾಮೂಹಿಕ ಹೂವಿನ‌ಪೂಜೆ,ಪುಸ್ತಕ ಪೂಜೆ ನಡೆಲಿದೆ.ವಿಜಯ ದಶಮಿಯಂದು ಸಾಮೂಹಿಕ ದುರ್ಗಾನಮಸ್ಕಾರ ಹೀಗೆ ನವರಾತ್ರಿ ಆಚರಣೆ ನೆರವೇರುವುದು ,ಪ್ರತಿನಿತ್ಯ ಹೂವಿನ ಅಲಂಕಾರವಿರುತ್ತದೆಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply