ಮಣಿಪಾಲದಲ್ಲಿ ರೋಟರಿ ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನಾಚರಣೆ

ರೋಟರಿ ವಲಯ 4ರ ಎಲ್ಲ ಕ್ಲಬ್ ಗಳು , ಮಣಿಪಾಲ ಮಾಹೆಯ ಅಂತರಾಷ್ಟ್ರೀಯ ಸಹಯೋಗ ಕಚೇರಿಯ ಸಹಕಾರದೊಂದಿಗೆ ಪೆಬ್ರವರಿ 23ರಂದು ರೋಟರಿ ಜನ್ಮ ದಿನಾಚರಣೆಯನ್ನು ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನಾಚರಣೆ ಯನ್ನು ಮಾಹೆಯ ಢಾ.ಟಿ.ಎಂ.ಎ.ಪೈ ಹಾಲ್ ನಲ್ಲಿ ಆಚರಿಸಿದರು. ಉದ್ಘಾಟನೆಯನ್ನು ಮಾಡಿದ ರೋಟರಿ ಜಿಲ್ಲಾ ಗವರ್ನರ್ ಡಾ.ಜಯಗೌರಿಯವರು ಮಾತಾಡುತ್ತಾ ಸೇವೆ ಮತ್ತು ಸ್ನೇಹದ ಉದ್ಧೇಶ ದಿಂದ ಅಮೇರಿಕದಲ್ಲಿ ಪ್ರಾರಂಭವಾದ ಈ ಸೇವಾಸಂಸ್ಥೆಯು ಇನ್ನೂರಕ್ಕೂ ಮಿಕ್ಕಿ ದೇಶಗಳಲ್ಲಿ ವ್ಯಾಪಿಸಿ ತನ್ನ ಸೇವಾಚಟುವಟಿಕೆಗಳ ಮೂಲಕ ಜಗತ್ತಿನ ಶ್ರೇಷ್ಠ ಸೇವಾಸಂಸ್ಥೆಯಾಗಿ ಗುರುತಿಸಲ್ಪಟ್ಟು ವಿಶ್ವ ಶಾಂತಿಗಾಗಿ ದುಡಿಯುತ್ತಿದೆ. ಎಲ್ಲಾ ರೋಟರಿ ಸದಸ್ಯರು ಒಬ್ಬರನೊಬ್ಬರನ್ನು ಅರಿತುಕೊಂಡರೆ ವಿಶ್ವ ಶಾಂತಿಗೆ ತಮ್ಮ ಕೊಡುಗೆ ನೀಡಲು ಸಾದ್ಯ ಎಂದು ಹೇಳಿ ಎಲ್ಲರಿಗೂ ರೋಟರಿಯ ಜನ್ಮದಿನದ ಶುಭಹಾರೈಕೆಗಳನ್ನು ತಿಳಿಸಿದರು. ಮಾಹೆಯ ಸಹಕುಲಪತಿಗಳಾದ ಪ್ರೋ.ಎನ್.ಎನ್.ಶರ್ಮ ಅವರು ಮಾಹೆಯು ರೋಟರಿಯ ಈ ವಿಶೇಷ ದಿನಾಚರಣೆಯಲ್ಲಿ ಬಾಗವಹಿಸುವಕ್ಕೆ ಹರ್ಷ ವ್ಯಕ್ತಪಡಿಸಿ ಬಾಗವಹಿಸಿದ ಎಲ್ಲರನ್ನು ಅಭಿನಂದಿಸಿದರು. ಮಾಹೆಯ ಅಂತರರಾಷ್ಟ್ರೀಯ ಸಹಯೋಗ ಕಚೇರಿಯ ನಿರ್ದೇಶಕರಾದ ಡಾ.ಕರುಣಾಕರ ಕೋಟೆಗಾರರವರು ಮಾತಾಡುತ್ತಾ ಪ್ರತಿಷ್ಟಿತ ಮಣಿಪಾಲ ವಿಶ್ವವಿದ್ಯಾಲಯದ ಲ್ಲಿ ಜಗತ್ತಿನ 50ಕ್ಕೂ ಮಿಕ್ಕಿ ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದು ಈವಿಶೇಷದಿನವನ್ನು ರೋಟರಿ ಯೋಡನೆ ಆಚರಿಸುವದಕ್ಕೆ ಸಂತೋಷ ವಾಗುತ್ತದೆ ಎಂದರು.

ಪ್ರಾರಂಭದಲ್ಲಿ ವಲಯ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯ ರು ಎಲ್ಲರನ್ನೂ ಸ್ವಾಗತಿಸಿದ ಬಳಿಕ ವಲಯ ತರಬೇತಿ ಗಾರ ರೋ.ಡಾ.ಸುರೇಶ್ ಶೆಣೈ ಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಲಯ ಕಾರ್ಯದರ್ಶಿರೋ.ಜನಾರ್ದನ ಭಟ್ ರು ದನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ದಲ್ಲಿ ವಲಯ ಸೇನಾನಿಗಳಾದ ರೋ.ಬಾಲಕೃಷ್ಣ ಕುಮಾರ್, ರೋ.ದಯಾನಂದ ನಾಯಕ್, ರೋ.ಗೀತಾಶ್ರೀ ಉಪಾಧ್ಯಾಯ, ರೋ.ರಾಜೇಶ್ ಡಿ.ಪಾಲನ್ ಮತ್ತು ವಿವಿದ ಕ್ಲಬ್ ಗಳ ಅಧ್ಯಕ್ಷ ರುಗಳಾದ ರೋ.ನಳೀನಿ ಶೆಟ್ಟಿ, ರೋ.ಪ್ರಭಾಕರ ಶೆಟ್ಟಿ, ರೋ. ನಿತ್ಯಾನಂದ ನಾಯಕ್, ರೋ. ರೇಣುಜಯರಾಂ, ರೋ.ಸಬಿತಾ ಭಟ್, ರೋ.ಜಗನ್ನಾಥ ಕೋಟೆ, ರೋ. ಪ್ರಸಾದ ಶೆಟ್ಟಿ, ರೋ. ಸೀತಾರಾಮ ತಂತ್ರಿ ಮತ್ತು ರೋ.ರವೀಂದ್ರ ಆಚಾರ್ಯ ರು ಉಪಸ್ಥಿತರಿದ್ದರು. ರೋ.ಹೇಮಂತ ಯು.ಕಾಂತರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ನಂತರ ನಡೆದ ವಸುದೈವಕುಟುಂಬಕಂ ಎಂಬ ವಿಷಯ ದಬಗ್ಗೆ ನಡೆದ ಗುಂಪುಚರ್ಚೆಯಲ್ಲಿ ಸಮನ್ವಯಕಾರರಾಗಿ ಮಾಹೆಯ ಡಾ.ಪ್ರವೀಣ್ ಶೆಟ್ಟಿ ಯವರು ನಡೆಸಿ ಕೊಟ್ಟು ಜಪಾನಿನ ಕಝುವುಕಿ ಫರುಕ್ಕಿ, ಕೆನಡಾದ ಕಾರ್ಲ್ ಸ್ಟೀಫನ್ಸ್, ಫ್ರಾನ್ಸನ ವಿನ್ಸೆಂಟ್ ಮಾರಿ ಮತ್ತು ಇಂಗ್ಲೆಂಡ್ ನ ಎಮ್ಮಾ ಎಲಿಜಬೆತ್ ವರ್ಗೀಸ್ ಅವರುತಮ್ಮ ತಮ್ಮ ವಿಷಯ ಮಂಡನೆ ಮಾಡಿದರು. ಪ್ರಾರಂಭದಲ್ಲಿ ರೋ.ರೇಣುಜಯರಾಂ ಅವರು ಸ್ವಾಗತಿಸ ಕೊನೆಗೆ ದನ್ಯವಾದ ಸಮರ್ಪಿಸಿದರು. ನಂತರ ಮಾಹೆಯ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮದೇಶದ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಪ್ರದರ್ಶಿಸಿದರು. ರೋಟರಿಸದಸ್ಯರು ಭಾರತೀಯ ವೇಷಭೂಷಣ ಗಳೊಂದಿಗೆ ವಿವಿದ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ನಡೆಸಿಕೊಟ್ಟರು.

 
 
 
 
 
 
 
 
 
 
 

Leave a Reply