ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆಯ  ಬಹುಮಾನ ವಿತರಣೆ 

ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕನ್ನಡ  ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ಕುಸುಮ ಫೌಂಡೇಶನ್ ನಾಗೂರು, ಸಂಯುಕ್ತವಾಗಿ ಮಹಿಳೆಯರಿಗಾಗಿ  ನಡೆಸಿದ ಉಡುಪಿ ಜಿಲ್ಲಾಮಟ್ಟದ (ಡಾಕ್ಟರ್ ಭಾರತಿ ಮರವಂತೆ ರಂಗೋಲಿ ಬಹುಮಾನ) ರಂಗೋಲಿ ಸ್ಪರ್ಧೆ ಮತ್ತು  ಬಹುಮಾನ ವಿತರಣಾ ಕಾರ್ಯಕ್ರಮ ಭಾನುವಾರ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಳಿನ ಕುಮಾರ್ ಶೆಟ್ಟಿ ವಹಿಸಿದ್ದರು.ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಹಾಗೂ ನಿವೃತ ಉಪನ್ಯಾಸಕ ಎಸ್ ಜನಾರ್ಧನ್ ಮರವಂತೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಉಡುಪಿ ಜಿಲ್ಲಾ 2020ರ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ  ಅಂಪಾರು  ಉದಯಕುಮಾರ್ ಉಪಸ್ಥಿತರಿದ್ದರು. ಜಿಲ್ಲಾಧ್ಯ್ಷರಾದ ಗಣೇಶ್ ಗಂಗೊಳ್ಳಿ ಪ್ರಾಸ್ತವಿಸಿ, ಧನ್ಯವಾದವಿತ್ತರು. ರಂಗೋಲಿ ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನ ರೂ:3,000/- ಹಾಗೂ ದ್ವಿತೀಯ ಬಹುಮಾನ ರೂ: 2,000/- ಮತ್ತು ತೃತೀಯ ಬಹುಮಾನ ರೂ: 1,000/- .ನಗದು ಪುರಸ್ಕಾರ ಹಾಗು ಪ್ರಶಸ್ತಿ ಪತ್ರ ನೀಡಲಾಯಿತು. ಕನ್ನಡ ಜಾನಪದ ಪರಿಷತ್  ರಾಜ್ಯಾಧ್ಯಕ್ಷ ಡಾ ಬಾಲಾಜಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮಸಂಯೋಜಿಸಲಾಗಿತ್ತು.  

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply