ಕೇಳ್ರಪ್ಪೋ ಕೇಳಿ~✍️ ಜಿ ವಾಸುದೇವ ಭಟ್ ಪೆರಂಪಳ್ಳಿ

ಈ ದೇಶದಲ್ಲಿ ಇನ್ನು ರೈತನೂ ಕೋಟ್ಯಧೀಶನಾಗಬಹುದು…
ಅನ್ನದಾತನ ಭಾಗ್ಯದ ಬಾಗಿಲು ತೆರೆಯುತ್ತಿರುವ ಕೇಂದ್ರ ಬಿಜೆಪಿ ಸರಕಾರ..
ಅನ್ನದಾತನ ಆತ್ಮನಿರ್ಭರತೆಗಾಗಿ ಐತಿಹಾಸಿಕ ನಿರ್ಧಾರ..

ಶತಮಾನಗಳಿಂದ ಈ ತನಕ ರೈತನೊಬ್ಬನ ಕತೆ ಫ್ರಾರಂಭ ವಾಗುತ್ತಿದ್ದುದೇ ಬಡ ಎಂಬ ವಿಶೇಷದಣದೊಂದಿಗೆ ….ಹೌದು ತಾನೇ??. ರೈತನೊಬ್ಬ ಬಡನಾಗಿ ಹುಟ್ಟಿ ಬಡವನಾಗಿ ಬದುಕಿ ಬಡವನಾಗಿಯೇ ಸಾಯಬೇಕೆಂಬ ಅಘೋಷಿತ ಕಾನೂನು ಗಳು ಈ ದೇಶದಲ್ಲಿದ್ದವು .

ಎಪಿಎಂಸಿ ( APMC) ಎಂಬ ರೈತ ಮಾರುಕಟ್ಟೆಗಳು ಕಾಂಗ್ರೆಸ್ ಸೇರಿದಂತೆ ಅನೇಕ ವಿಪಕ್ಷಗಳಿಗೆ ಅಕ್ಷರಶಃ ATMC ಅರ್ಥಾತ್ ಕೋಟಿ ಕೋಟಿ ರಹಣವನ್ನು ಯಾವಾಗಲೂ ಲೂಟಿ ಹೊಡೆಯುವ ಕಂಪೆನಿಗಳಾಗಿದ್ದವವು. ರೈತನೊಬ್ಬ ಶ್ರಮ ವಹಿಸಿ, ಬೆನ್ನು ಬಗ್ಗಿಸಿ ಬೆಳೆಯುತ್ತಿದ್ದ ಫಲವತ್ತಾದ ಬೆಳೆಗಳು ಈ ಎಪಿಎಂಸಿ ಮಾರುಕಟ್ಟೆಯಲ್ಲೇ ಮಾರಾಟಮಾಡಬೇಕೆಂಬ ಕರಾಳ ಶಾಸನದಿಂದ ಅನ್ನದಾತನ ಮೈಯಲ್ಲಿನ ಚರ್ಮ ಸುಲಿದೂ ಸುಲಿದು ಮಾಂಸ ರಕ್ತಗಳನ್ನೆಲ್ಲ ಅಲ್ಲಿನ ಮಧ್ಯವರ್ತಿ ಮಹಾಶಯರು(ಕಾಂಗ್ರೆಸ್ ಮತ್ತು ಅನೇಕ ವಿಪಕ್ಷ ಪ್ರಾಯೋಜಿತ) ಬಸಿದು ಕುಡಿದು ಆತನನ್ನು ಕೇವಲ ..ಕೇ..ವಲ ಎಲುಬಿನ ಅಸ್ಥಿಪಂಜರದಂತೆ ಮಾಡಿಬಿಟ್ಟಿದ್ದರು.

ತಾನು ಬೆಳೆದರೂ ಮೃಷ್ಟಾನ್ನ ಮಾತ್ರ ಈ ಮಧ್ಯವರ್ತಿಗಳಿಗೆ ಎಂಬಂತಾಗಿ ರೈತ ತಾನು ಮಾತ್ರ ತಿಳಿಗಂಜಿ ಮಾತ್ರ ಕುಡಿಯುವಂಥಾ ಅಮಾನವೀಯ ಸ್ಥಿತಿ ಇತ್ತು. ಈ ರೀತಿಯಲ್ಲಿ ರೈತನ ಬದುಕನ್ನು ಹೈರಾಣಾಗಿಸಿತ್ತು ಈ ತನಕದ ರೈತಮಸೂದೆಗಳು. ಪರಿಣಾಮ ಸಮಸ್ತ ರೈತ ಸಮುದಾಯ ಏನೇ ಎಷ್ಟೇ ದುಡಿದರೂ ನೆಮ್ಮದಿ ಸಮೃದ್ಧಿ ಕಾಣದೇ ನಲುಗಿ ಹೋಗಿತ್ತು. ಅದರ ಮುಂದಿನ ಭಾಗವೆಂಬಂತೆ ರೈತನ ಮಗನಾಗಿ ಹುಟ್ಟುವುದೆಂದರೆ ಅದೊಂದು ದರಿದ್ರ ಬದುಕು ರೌರವ ನರಕ ಎಂದೇ ರೈತನೂ ಭಾವಿಸಿದ.ಆತನ ಮಕ್ಕಳೂ ಅದೇ ನಿರ್ಧಾರಕ್ಕೆ ಬರುವಂತಾಗಿ ಪರಂಪರೆಯಿಂದ ಬಂದ ಕೃಷಿಕಾಯಕದಿಂದ ರೈತನ ಮಕ್ಕಳು ಮುಕ್ತಿ ಬಯಸಿ ನಗರದೆಡೆಗೆ ಗುಳೇ ಹೊರಡಲಾರಂಭಿಸಿದರು. ರೈತನ ಮುಖದಲ್ಲಿ ಸಮೃದ್ಧಿ ನೆಮ್ಮದಿಯ ನಗು ಜೀವನ ಪರ್ಯಂತ ಕಾಣದಂತೆ ಮಾಡಿ ಆತನ ಬದುಕನ್ನೇ ನರಕ ಮಾಡಿ ವಿಕಟನಗೆ ಬೀರುತ್ತಿದ್ದರು. ಈ ಮಧ್ಯವರ್ತಿ ರಕ್ಕಸರು.

ಮಾರುಕಟ್ಟೆಯಲ್ಲಿ ಇಂದು ನಾವು ಕೆಜಿಯೊಂದಕ್ಕೆ ಅರುವತ್ತೋ ಎಪ್ಪತ್ತೋ ಕೊಟ್ಟು ಖರೀಸುವ ಯಾವುದೋ ತರಕಾರಿ ಕಟ್ಟಕಡೆಗೆ ಅದನ್ನು ಬೆಳೆದ ರೈತನಿಗೆ ಸಿಗೋದು ನಾಲ್ಕೋ ಐದೋ ರೂಪಾಯಿ ಮಾತ್ರ. ಉಳಿದಂತೆ ಎಲ್ಲ ಹಣ ಈ ದಲ್ಲಾಳಿ ಅಸುರರ ಕೈ ಸೇರ್ತಾ ಇದೆ. ತಾನು ಬೆಳೆದ ಬೆಳೆಗೆ ಬೆಲೆಯನ್ನು ನಿಗದಿ ಪಡಿಸುವ ಸ್ವಾತಂತ್ರ್ಯ ವನ್ನೂ ಈ ತನಕದ ರೈತಮಸೂದೆಗಳು ಕಸಿದುಕೊಂಡಿದ್ದವು .

ಆದ್ದರಿಂದ ಜಗದ ಬದಲಾವಣೆಗೆ ಅನುಗುಣವಾಗಿ ತಾನೂ ಸಶಕ್ತಬಾಗಬೇಕು ಸುದೃಢ ಬದುಕು ಕಟ್ಟಿಕೊಳ್ಳಬೇಕು. ಐಟಿ ಬಿಟಿ ಯುವಕರಂತೆ ತನ್ನ ಮಕ್ಕಳೂ ಲಕ್ಷಾಂತರ ರೂ. ಸಂಪಾದಿಸುವ ಸಿರಿವಂತರಾಗಬೇಕು ಎಂಬ ರೈತಾಪಿ ವರ್ಗದ ಕನಸು ಕನಸಾಗೇ ಇತ್ತು. ರೈತ ಎಂದರೆ ಬಡವ ಎಂದೇ ಅರ್ಥ ಎಂಬ ಪರಿಸ್ಥಿತಿಯಂದಾಗಿ ಒಂದು ಎರಡು ತಲೆಮಾರಿನ ಯುವಕರನ್ನು ಮದುವೆಯಾಗಲೂ ಯುವತಿಯರು ಮುಂದೆ ಬಾರದ್ದರಿಂದ ಅದೆಷ್ಟೊ ಯುವಕರು ವಿವಾಹ ವಂಚಿತರೂ ಆಗಬೇಕಾದ ದುರ್ದೈವ ಬಂದು ಬಿಟ್ಟಿತು. ಅದಕ್ಕೆಕಲ್ಲ ಕಾರಣ ಈ ತನಕ ಇದ್ದ ರೈತಮಸೂದೆಗಳು.ಆದರೆ ಈಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ಕರಾಳ ಮಸೂದೆಗಳನ್ನು ವರ್ತಮಾನಕ್ಕನುಗುಣವಾಗಿ ತಿದ್ದುಪಡಿ ಮಾಡಿ ಶಾಸನಾತ್ಮಕ ಅಂಗೀಕಾರ ಪಡೆಯಲು ಸಿದ್ಧವಾಗಿದೆ. ಇದರಿಂದಾಗಿ ರೈತನ ಭಾಗ್ಯದ ಬಾಗಿಲು ತೆರೆಯಲು ಸಿದ್ಧವಾಗಿದೆ ‌ರೈತನೂ ಈ ದೇಶದಲ್ಲಿ ಸಶಕ್ತನಾಗಿ ಸುದೃಢ ಬದುಕು ಕಟ್ಟಿಕೊಳ್ಳುವ ಅವಕಾಶ ತೆರಯುತ್ತಿದೆ. ತಾನು ಬೆಳೆಯನ್ನು ತನಗೆ ಬೇಕಾದಲ್ಲಿ ಒಳ್ಳೆಯ ದರಕ್ಕೆ ಮಾರಾಟ ಮಾಡುವ ಸ್ವಾತಂತ್ರ್ಯ ಆತನಿಗೆ ಸಿಗುತ್ತಿದೆ. ಮಧ್ಯವರ್ತಿಗಳ ಕಪಿಮುಷ್ಟಿಯಿಂದ ರೈತನ ವ್ಯಾಪಾರ ಮುಕ್ತವಾಗಲು ಅನುಕೂಲವಾಗುತ್ತಿದೆ. ರೈತನ ಮಕ್ಕಳೂ ಐಟಿ ಬಿಟಿಗೆ ಸಮನಾಗಿ ಸಂಪಾದಿಸುವ ಯೋಗ್ಯತೆ ಸಿಗುತ್ತಿದೆ. ಹೊಲ ಗದ್ದೆಗಳನ್ನು ಬಿಟ್ಟು ನಗರದೆಡೆಗೆ ಧಾವಿಸಿದ ಅನ್ನದಾತನ ಮಕ್ಕಳು ಮತ್ತೆ ಮಣ್ಣಿನೆಡೆಗೆ ತೆರಳಿ ಆತ್ಮನಿರ್ಭರ ಅನ್ನದಾತನಾಗಲು ಕೇಂದ್ರಸರಕಾರ ಅವಕಾಶ ಮಾಡಿಕೊಡ್ತಾ ಇದೆ .

ಆದರೆ ಈ ಐತಿಹಾಸಿಕ ತಿದ್ದುಪಡಿ ಮಸೂದೆ ಅಂಗೀಕಾರದಿಂದ ಕಾಂಗ್ರೆಸ್ ಸೇರಿದಂತೆ ಅನೇಕ ವಿಪಕ್ಷಗಳ ಬದುಕಿನ ತುತ್ತಿಗೇ ಸಂಚಕಾರ ಬಂದಿದೆ. ಈ ತನಕ ಕೋಟ್ಯಾಂತರ ಲೂಟಿ ಹೊಡೆಯುತ್ತಿದ್ದವರಿಗೆ ತಲೆಯ ಮೇಲೆ ಆಕಾಶವೇ ಬಿದ್ದಂತಾಗಿದೆ. ಈಗ ಇಂಥಾ ಲೂಟಿಕೋರರೆಲ್ಲ ಸೇರಿ ರೈತನ ಒಳಿತಿಗಾಗಿ ರೈತಮಸೂದೆ ತಿದ್ದುಪಡಿ ಶಾಸನ ಜಾರಿ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ರಸ್ತೆಗಿಳಿದು ಬೊಬ್ಬೆ ಹೊಡೆಯುತ್ತಿದ್ದಾರೆ.

ಎಚ್ಚರ …ಎಚ್ಚರ ..ನಾಗರಿಕರೇ. ಕಾಂಗ್ರೆಸ್ ಸೇರಿದಂತೆ.. ವಿಪಕ್ಷಗಳು ಮಾಡುತ್ತಿರುವ ಈ ಪ್ರತಿಭಟನೆಯಲ್ಲಿ ರೈತನ ಒಳಿತಿನ ಪರ ಎಳ್ಳಷ್ಟೂ ಭಾವನೆಗಳಿಲ್ಲ. ಈ ತನಕ ತಮ್ಮ ATM ಆಗಿದ್ದ APMC ಗಳು ಮುಂದೆ ತಮ್ಮ ಖಜಾನೆ ತುಂಬಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆ ಮಾತ್ರ ಇವರುಗಳ ಬೊಬ್ಬೆಯ ಹಿಂದೆ ಇರುವ ಏಕ ಮಾತ್ರ ಸತ್ಯ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply