ಮೋದಿ ವಿದೇಶ ಪ್ರವಾಸಕ್ಕೆ 5 ವರ್ಷದಲ್ಲಿ 517.82 ಕೋಟಿ ಖರ್ಚು 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ 2015ರ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಅದರ ಸಂಪೂರ್ಣ ಖರ್ಚು-ವೆಚ್ಚದ ಕುರಿತು ಮಾಹಿತಿಯನ್ನು ವಿದೇಶಾಂಗ ಸಚಿವಾಲಯ ರಾಜ್ಯಸಭೆಯಲ್ಲಿ ನೀಡಿದೆ.

ಇದರ ಬಗ್ಗೆ ಬಹಳಷ್ಟು ಪ್ರಶ್ನೆಗಳು ಕೇಳಿಬಂದಿದ್ದವು, ಅದಕ್ಕೆ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವ ವಿ ಮುರಳಿಧರನ್ ಲಿಖಿತವಾಗಿ ಉತ್ತರಿಸಿದ್ದಾರೆ. ಅದರಲ್ಲಿ ಮೋದಿಯವರು 2015ರಿಂದ ಕಳೆದ ಐದು ವರ್ಷಗಳಲ್ಲಿ ಒಟ್ಟು 50 ದೇಶಗಳಿಗೆ ಭೇಟಿ ನೀಡಿದ್ದು ಅದಕ್ಕಾಗಿ 517.82 ಕೋಟಿ ರು ಖರ್ಚಾಗಿದೆ.ಮತ್ತು ಇದರಲ್ಲಿ ಯುಎಎಸ್ ಹಾಗೂ ರಷ್ಯಾ ಭೇಟಿ ಪ್ರಮುಖವಾದುದು ಎಂದು ತಿಳಿಸಿದ್ದಾರೆ.

ಇದೇ ಸಂದರ್ಭ ಸಿಂಗಪೂರ, ಜರ್ಮನಿ, ಫ್ರಾನ್ಸ್​​, ಯುಎಇ, ಶ್ರೀಲಂಕಾ ಪ್ರವಾಸ ಕೂಡ ಮಾಡಿದ್ದು , ಒಟ್ಟು 517.82 ಕೋಟಿ ರೂ ಖರ್ಚಾಗಿದೆ. ಈ ಭೇಟಿ ವೇಳೆ ವಾಣಿಜ್ಯ ಒಪ್ಪಂದ, ಹೂಡಿಕೆ, ತಂತ್ರಜ್ಞಾನ, ರಕ್ಷಣಾ ವಲಯ, ದ್ವಿಪಕ್ಷೀಯ ಮಾತುಕತೆ ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ .

ಅವರ ಕೊನೆಯ ಪ್ರವಾಸದಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದಿದ್ದು ಅಲ್ಲಿ ಬ್ರಿಕ್ಸ್​ ​ಬ್ರೆಜಿಲ್​, ರಷ್ಯಾ, ಇಂಡಿಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. 2020ರಲ್ಲಿ ಕೊರೋನಾದ ಕಾರಣ ಪ್ರಧಾನಿ ಮೋದಿ ಯಾವುದೇ ಪ್ರವಾಸ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

Leave a Reply