181ನೇ ವಿಶ್ವ ಛಾಯಾಗ್ರಹಣ ದಿನ…

 ಇಂದು ವಿಶ್ವ ಛಾಯಾಗ್ರಹಣ ದಿನ.. ಲೂಯಿಸ್ ಡೆಗೋರಿಯೋ ಎಂಬ ಮಹಾನುಭಾವನ ಸತತ ಪರಿಶ್ರಮದ ಫಲವಾಗಿ ಡೆಗೋರಿಯೋ ಮಾದರಿಯ ಕ್ಯಾಮರಾ ಆವಿಷ್ಕಾರಗೊಂಡಿತ್ತು.1839 ರ ಅಗೋಸ್ತು 19 ರಂದು ಫ್ರೆಂಚ್ ಸರಕಾರವು ಡೆಗೋರಿಯೋ ಟೈಪ್ ತಂತ್ರಜ್ಞಾನದ ಹಕ್ಕು ಸ್ವಾಮ್ಯವನ್ನು ಮನುಕುಲಕ್ಕೆ ಕೊಡುಗೆಯಾಗಿ ಘೋಷಿಸಿದ ದಿನವನ್ನು ಪ್ರಪಂಚದಾದ್ಯಂತ ವಿಶ್ವ ಛಾಯಾಗ್ರಹಣ ದಿನವನ್ನಾಗಿ ಆಚರಿಸ ಲಾಗುತ್ತದೆ.

ಛಾಯಾಗ್ರಹಣ ಕ್ಷೇತ್ರದ ಯೋಜನೆ, ಯೋಚನೆಗಳ ವಿನಿಮಯ, ಜನರಿಗೆ ಜಗತ್ತಿನ ವಿಸ್ಮಯಗಳ ಪರಿಚಯ, ಸೃಜನಾತ್ಮಕ ನೈಜ ಚಿತ್ರಣಗಳ ಪ್ರದರ್ಶನ, ಪರಸ್ಪರ ಕೌಶಲ್ಯ ಅಭಿವೃದ್ಧಿಯ ಪರಿಕಲ್ಪನೆ, ಮುಂದಿನ ಪೀಳಿಗೆಗೆ ತಜ್ಞರ ಅನುಭವದ ಹರಿವು, ಛಾಯಾಗ್ರ ಹಣ ವೃತ್ತಿಯಲ್ಲಿನ ಸಮಸ್ಯೆ, ಸವಾಲು,ಸಂಕಷ್ಟಗಳು, ಛಾಯಾಗ್ರಹಣ ಕ್ಷೇತ್ರ ಬೆಳೆದು ದಾರಿ,ಹಿರಿಯ ಛಾಯಾಗ್ರಾಹಕ ರಿಗೆ  ಗೌರವ ಪ್ರದಾನ, ಅವರೊಂದಿಗೆ ವೃತ್ತಿ ಕೌಶಲ್ಯ ವಿಚಾರ ವಿನಿಮಯ, ವಿಶಿಷ್ಟ ಛಾಯಾಗ್ರಾಹಕರಿಗೆ ಅಭಿನಂದನೆ, ಪುರಸ್ಕಾರ, ಹೀಗೆ ಛಾಯಾ ಗ್ರಹಣ ಕ್ಷೇತ್ರದ ವಿವಿಧ ಆಯಾ ಮಗಳ ಮೇಲೆ ಬೆಳಕು ‌ಚೆಲ್ಲುವುದು ವಿಶ್ವಛಾಯಾಗ್ರಹಣ ದಿನದ ವಿಶೇಷ.

ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಎಂಬುದು ಲೋಕೋಕ್ತಿ. ಒಂದು ಪುಟದಷ್ಟು ಬರೆದರೂ ಅರ್ಥವಾಗದ ವಿಷಯ ಗಳನ್ನು ಒಂದು ಛಾಯಾಚಿತ್ರ  ಕ್ಷಣಮಾತ್ರದಲ್ಲಿ ಮನಮುಟ್ಟುವಂತೆ ವಿವರಿಸುವ ಸಾಮರ್ಥ್ಯ ಹೊಂದಿರುತ್ತದೆ. ಒಂದು ಘಟನೆಯ  ಸಾಕ್ಷ್ಯಕ್ಕೆ ಛಾಯಾಚಿತ್ರ ಅತ್ಯಮೂಲ್ಯ ದಾಖಲೆ. ಅಲ್ಲದೇ ಗತಕಾಲದ ನೆನಪುಗಳು, ಸಂತಸದ ಕ್ಷಣಗಳು, ಸಂಭ್ರಮದ ಘಳಿಗೆಗಳು ಚಿರನೂತನವಾಗುವಲ್ಲಿ ಛಾಯಾಗ್ರಹಣದ ಪಾತ್ರ ಮಹತ್ವದ್ದು.

ನಮ್ಮ ಛಾಯಾಚಿತ್ರವನ್ನು ತೆಗೆಯುವ ಸಮಯದಲ್ಲಿ ತಪ್ಪದೇ ನಗು ನಗುತ್ತಾ ನಮ್ಮ ಭಾವಚಿತ್ರ ಉತ್ತಮವಾಗಿ ಬರಲೆಂದು ಹಾರೈಸುವ  ನಾವು ಇಂದು ವಿಶ್ವ ಛಾಯಾಗ್ರಹಣ ದಿನವನ್ನು  ನಗು ನಗುತ್ತಾ ಆಚರಿಸೋಣ‌. ಎಲ್ಲ ಛಾಯಾಗ್ರಾಹಕ ಬಂಧು ಗಳಿಗೂ, ಛಾಯಾಗ್ರಹಣ ಕ್ಷೇತ್ರದಲ್ಲಿ ದುಡಿಯುವವರಿಗೂ ಹಾಗು ಛಾಯಾಚಿತ್ರ ಪ್ರೇಮಿಗಳಿಗೂ  ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು 

ಇಂದು ಬೆಳಿಗ್ಗೆ ಸ್ಮೈಲ್ ಪ್ಲೀಸ್ ಎಂದೇ ಆರಂಭಿಸಿದೆ ನನ್ನ ದಿನ…
ಏಕೆಂದರೆ ನೆನಪಾಯ್ತು ನನಗೆ ಇಂದು ವಿಶ್ವ ಛಾಯಾಗ್ರಹಣ ದಿನ..

ಪೂರ್ಣಿಮಾ ಜನಾರ್ದನ್ ಕೊಡವೂರು

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply