ಸರಳತೆಯ ಪಾಠ ಕಲಿಸಿದ ಕೊರೋನ ಎಂಬ ಮಾಯೆ

ಆಡಂಬರದ ಜೀವನ ಶೈಲಿಯನ್ನು, ನಾಲ್ಕು ಜನ ಆಡ್ಕೋಳೋತರ ಆಗಿ ಬಿಟ್ಟಿದೆ, ಅವ ಅಲ್ಲಿದ್ದಾನೆ, ಇವಳು ಇಲ್ಲಿದ್ದಾಳೆ, ಅವ ಅಲ್ಲಿ ಕೆಲಸ, ಹೀಗೆ ಹಾಗೆ ಅನ್ನೋರಿಗೆ ಈಗ ಒಂದೇ ಮನೆಯಲ್ಲೇ ಕೆಲಸ‌ ಮಾಡಿಕೊಂಡು ಇದ್ದಾನೆ‌ ಅಥವಾ ಕೆಲಸ ಇಲ್ಲದೆ ಮನೆಯಲ್ಲೇ ಇದ್ದಾನೆ ಎಂಬೋ ಇತ್ಯಾದಿ ಪರಿಸ್ಥಿತಿ ಬಂದು ಹೋಗಿದೆ. ಆದರೆ ಜೀವನ ಶೈಲಿಗೆ ಒಂದು ಸಾಣೇ ಹಿಡಿದು, ಹ್ಯಾಗ್ಯಾಗೋ ಬದುಕು ವವರು ಈಗ ಹೀಗೂ ಬದುಕಬಹುದು ಎಂದು ತೋರಿಸುವಂತೆ ಮಾಡಿದೆ. 

ಯಾವಾಗ ಸಾವಿನ ಮನೆಗೆ ಇಪ್ಪತ್ತು, ಮದುವೆ ಮನೆಗೆ ಐವತ್ತು ಅಂತ ಜನ ಫಿಕ್ಸ್ ಮಾಡಿದ್ರೋ ಆಗಲೇ ಜನಕ್ಕೆ ಗೊತ್ತಾಯಿತು ಸಾವಿನ ಮನೆಯಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಜನ ದುಃಖ ಪಡೋಲ್ಲ, ಮದುವೆ ಮನೆಲಿ ಐವತ್ತಕ್ಕಿಂತ ಹೆಚ್ಚು ಜನ ಖುಷಿಪಡೋಲ್ಲಾ ಎಂದು. ಇದು ಒಂದೆಡೆಯಾದರೆ ಪೂಜೆ ಪುನಸ್ಕಾರ, ಜಾತ್ರೆ, ಅದ್ದೂರಿ ಸಮಾರಾಧನೆ ಹೀಗೆ ಜನ ಅವಶ್ಯಕತೆಗಿಂತ ಹೆಚ್ಚಾಗಿ ದುಂದುವೆಚ್ಚ ಮಾಡೋರಿಗೆ ಈಗ ಹಣದ ಬೆಲೆ ಗೊತ್ತಾಗಿದೆ, ಹಾಗೆಯೇ ಮನೆಯಲ್ಲಿ ಕೂತು ತಿನ್ನದೇ, ಮೂರು ಹೊತ್ತೂ ಕೇವಲ ಹೋಟೆಲ್, ಪಾರ್ಟಿ, ಮೋಜು ಮಸ್ತಿನ ಗೋಜಿಲ್ಲದೆ ಈಗ ಸುಮ್ನೆ ಕೂರುವಂತೆ ಮಾಡಿದೆ.

ಎಸಿ ನೇ ಬೇಕು ಎನ್ನೋರು ಫ್ಯಾನಿನ ‘ಬಿಸಿ’ ಗಾಳಿಗೂ ಮೈಯೊಡ್ಡುವಂತಾಗಿದೆ, ಲಕ್ಷದ ಕಡೆಗೆ ಲಕ್ಷ್ಯವಿದ್ದ ಕಣ್ಣುಗಳು, ಕೇವಲ ಕೆಲವೇ ಸಾವಿರದ ಕೆಲಸಕ್ಕೂ ಕೈಯೊಡ್ಡುವಂತಾಗಿದೆ. ಈಗ ಅದು, ಇದು ಎನ್ನದೆ ಯಾವುದು ಆಫ್ ರೇಟ್, ಚೀಪ್ ರೇಟ್ ಲಿ ಸಿಗುತ್ತೋ ಅದಕ್ಕೇ ಹೊಂದಿಕೊಂಡು ಹೋಗುವಂತಾಗಿದೆ, ಪೇಟೆ,ಪಟ್ಟಣ ಅಂತ ಅಲ್ಲೇ ಇರುತ್ತಿದ್ದವರು ಮತ್ತೆ ಹಳ್ಳಿಕಡೆಗೆ ಬರುವಂತಾಗಿದೆ, ಕೃಷಿ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ. ಹೀಗೆ ಯಾವುದೂ ಬರೋಲ್ಲ ಎಂದು ಮುಂದಿನ ದಿನಗಳಲ್ಲಿ ಹೇಳಬಾರದು, ಕುಂದಾಪ್ರ ಕನ್ನಡದ ಒಂದು ಗಾದೆ ಇದ್ದಿತ್ ‘ಕಲ್ತ್ ಮರೀಕ್ ಅಂಬ್ರು’ ಹಾಗೇ ಜೀವನದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿ ಬಂದ್ರು ಸರಳವಾಗಿ ಜೀವನ ಹೇಗೆ ನಡೆಸಬಹುದೆಂಬ ಪಾಠ ಮಾರ್ಚ್ ನಿಂದ ಆರಂಭವಾಗಿದೆ ಎಂದರೆ ತಪ್ಪಾಗಲಾರದು.

 
 
 
 
 
 
 
 
 
 
 

1 COMMENT

  1. ಲೇಖನ ತುಂಬಾ ಚೆನ್ನಾಗಿದೆ.
    ನಿಜ, ಸರಳತೆಯ ಜೀವನ ನಡೆಸುವುದನ್ನು ಮರೆತೇಹೋಗಿ, ಲೌಕಿಕ ವಸ್ತುಗಳ ಆಮಿಷದ ಹಿಂದೆ ನಾಗಾಲೋಟದಲ್ಲಿದ್ದ ಮಾನವನಿಗೆ ಒಂದು ವೈರಸ್ ಪಾಠ ಕಲಿಸುತ್ತಿದೆ!
    ಈ ಚೀನಿ ವೈರಸ್ನಿಂದ ಕಲಿತ ಪಾಠವನ್ನು ಮನುಷ್ಯ ಮರೆಯದಿದ್ದರೆ ಒಳಿತು.

    ಇಂತಿ,
    https://HalatuHonnu.BlogSpot.com/

Leave a Reply