ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕುಮಾರಿ ಸಾನ್ವಿಯವರಿಗೆ ಎರಡು ಪದಕ

ಉತ್ತರ ಕನ್ನಡ ಕರಾಟೆ ಟೀಚರ್ಸ್ ಆಂಡ್ ಸ್ಪೋರ್ಟ್ಸ್ ಅಸೋಸಿಯೇಷನ್, ಮೆಂಬರ್ ಆಫ್ ಸ್ಟೇಟ್ ಟೀಚರ್ಸ್ ಅಸೋಸಿಯೇಷನ್, ಯಿನ್-ಯಾಂಗ್ ಇಂಟರ್ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ-ಡೋ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ ಭಟ್ಕಳ-2024ರಲ್ಲಿ ಕುಮಾರಿ ಸಾನ್ವಿ ಎಸ್ ಅಂಚನ್ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಶ್ರೀಮತಿ ಅಶ್ವಿನಿ ಹಾಗೂ ಶ್ರೀ ಸಂದೀಪ್ ಕುಮಾರ್ ದಂಪತಿಯ ಪುತ್ರಿ ಕುಮಾರಿ ಸಾನ್ವಿ. ಕರಾಟೆ ತರಬೇತಿಯನ್ನು ಶ್ರೀ ರವಿ ಸಾಲ್ಯಾನ್ ಇವರಿಂದ ಪಡೆಯುತ್ತಿದ್ದಾರೆ.

 
 
 
 
 
 
 
 
 
 
 

Leave a Reply