ಭಕ್ತಿ ಪುಷ್ಪಾಂಜಲಿ ಬಾಲಪ್ರತಿಭಾ ಪುರಸ್ಕಾರ ಅಮೋಘ್ ಕಂಬಳಕಟ್ಟ ಮಡಿಲಿಗೆ

ಭಕ್ತಿ ಪುಷ್ಪಾಂಜಲಿ ಮುಖಪುಟ ಸಮೂಹದ ಐದನೇ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 19 ಮತ್ತು 20 ರಂದು ನಡೆಯಿತು. ಈ ಸಂದರ್ಭದಲ್ಲಿ ಆದಿವುಡುಪಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಬಹುಮುಖ ಪ್ರತಿಭೆ ಅಮೋಘ್ ಕಂಬಳಕಟ್ಟ ಇವರಿಗೆ ಬಾಲಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ವಿಜಯಲಕ್ಷ್ಮಿ ಮಯ್ಯರವರು ಯಕ್ಷಗಾನ, ಗಾಯನ, ಚಿತ್ರಕಲೆ, ಕೀಬೋರ್ಡ್ ಹೀಗೆ ವಿಭಿನ್ನ ಕಲೆಗಳನ್ನು ಕರಗತ ಮಾಡಿಕೊಂಡಿರುವ ಅಮೋಘ್ ನಿಗೆ ಈ ವರ್ಷದ ಬಾಲಪುರಸ್ಕಾರ ನೀಡಿದ್ದು ಸಾರ್ಥಕವೆನಿಸಿದೆ ಎಂದು ಅಭಿಪ್ರಾಯಪಟ್ಟರು. ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ವೀಡಿಯೋ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ವಿವಿಧ ವಿದ್ವಾಂಸರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ, ಬಳಗದ ಸದಸ್ಯರು ಹಾಗೂ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಕ್ತಿಪುಷ್ಪಾಂಜಲಿ ಸಮೂಹದ ಸಂಸ್ಥಾಪಕರಾದ ಶ್ರೀಮತಿ ವಿಜಯಲಕ್ಷ್ಮಿ ಮಯ್ಯರವರು ಸ್ವಾಗತಿಸಿ, ನಿರ್ವಾಹಕರಾದ ಶ್ರೀಮತಿ ಸುಮನಾ ಪ್ರಭಾಕರ್ ಅವರು ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply