ಪ್ರೊ ಮುರಳೀಧರ ಉಪಾಧ್ಯ ಹಿರಿಯಡಕ ಇವರಿಗೆ ಶ್ರೀ ಎ.ಈಶ್ವರಯ್ಯ ಸ್ಮಾರಕ ‘ಕಲಾಪ್ರವೀಣ’ ಪ್ರಶಸ್ತಿ- 2023

ರಾಗ ಧನ ಉಡುಪಿ ಸಂಸ್ಥೆಯ ವತಿಯಿಂದ, ಅನಂತಪುರ ಕುಟುಂಬದವರು ಕೊಡಮಾಡುವ ದಿ. ಎ.ಈಶ್ವರಯ್ಯ ಸ್ಮಾರಕ ‘ಕಲಾಪ್ರವೀಣ ಪ್ರಶಸ್ತಿ’ ಯನ್ನು ಈ ಬಾರಿ ಉಡುಪಿಯ ಹಿರಿಯ ಸಾಹಿತಿ, ಅಂಕಣಕಾರ ಹಾಗೂ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಇವರಿಗೆ 24.9.2023, ಭಾನುವಾರ ಸಂಜೆ 3.30 ರಿಂದ ಹಿರಿಯಡಕ ಸಮೀಪದ ಕುಕ್ಕೆಹಳ್ಳಿಯ ‘ಕನಸು ರೆಸಾರ್ಟ್’ ನಲ್ಲಿ ರಾಗಧನ ಸಂಸ್ಥೆಯ ರಾಗರತ್ನ ಮಾಲಿಕೆ -16ರ ಸಂದರ್ಭದಲ್ಲಿ ನೀಡಿ ಗೌರವಿಸಲಾಗುವುದು. ಡಾ.ಪಾದೇಕಲ್ಲು ವಿಷ್ಣು ಭಟ್ ಅಭಿನಂದನಾ ಭಾಷಣ ಮಾಡಿಲಿರುವರು. ಈ ಸಂದರ್ಭದಲ್ಲಿ ಶ್ರೀ ರಾಜೇಶ್ ಬಾಗ್ಲೋಡಿ ಹೊಸಬೆಟ್ಟು ಇವರಿಂದ ಕೊಳಲು ವಾದನ, ಶ್ರೀ ಕೆ.ಆರ್.ರಾಘವೇಂದ್ರ ಆಚಾರ್ಯ, ಶ್ರೀಮತಿ ಗಾರ್ಗಿ ಎನ್.ಶಬರಾಯ, ಶ್ರೀಮತಿ ಶ್ರುತಿ ಗುರುಪ್ರಸಾದ್ ಮತ್ತು ಕು.ಶ್ರಾವ್ಯ ಬಾಸ್ರಿ ಅವರಿಂದ ‘ಭಾವಗಾನ ಸಿಂಚನ’ ಕಾರ್ಯಕ್ರಮವೂ ನಡೆಯಲಿದೆ ಎಂದು ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. (9964140601)

Leave a Reply