ತುಳುವೆರೆ ಗೊಬ್ಬುಲು 2024

ಉಡುಪಿಃ ತುಳುಕೂಟ ಉಡುಪಿ (ರಿ.), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಲಯನ್ಸ್ ಕ್ಲಬ್ ಉಡುಪಿ ಅಮೃತ್ ಆಶ್ರಯದಲ್ಲಿ ತುಳುವೆರೆ ಗೊಬ್ಬುಲು 2024 ತುಳುನಾಡಿನ ಗ್ರಾಮೀಣ ಕ್ರೀಡೆಗಳ ಸ್ಪರ್ಧಾಕೂಟ ದಿನಾಂಕ: 25.02.2024 ಭಾನುವಾರ ಬೆಳಗ್ಗೆ 9.00 ಗಂಟೆಗೆ ಸ್ಥಳ: ಕ್ರಿಶ್ಚಿಯನ್ ಪ್ರೌಢಶಾಲೆ ಕ್ರೀಡಾ೦ಗಣ ಉಡುಪಿಯಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 9.00 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಶ್ರೀ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು ತುಳುಕೂಟ ಉಡುಪಿ (ರಿ.) ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ವಿ.ಕೆ.ಡೆವಲಪರ್ಸ್ ಮುಖ್ಯಸ್ಥ ಶ್ರೀ ಕರುಣಾಕರ ಎಂ.ಶೆಟ್ಟಿ, ಶ್ರೀ ರೋಷನ್ ಕುಮಾರ್ ಶೆಟ್ಟಿ. ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಶ್ರೀ ಹರಿಪ್ರಸಾದ್ ರೈ, ಅಧ್ಯಕ್ಷರು ಹೆಚ್.ಪಿ.ಆರ್.ಗ್ರೂಪ್ ಅಪ್ ಇನ್ಸಿಟ್ಯೂಷನ್ಸ್ ಉಡುಪಿ ಶ್ರೀಮತಿ ನಿರುಪಮಾ ಪ್ರಸಾದ್ ಶೆಟ್ಟಿ. ಪ್ರವರ್ತಕರು ಸಫಲ್ಯ ಟ್ರಸ್ಟ್ (ರಿ) ಉಡುಪಿ ಶ್ರೀ ಕೆ.ಸತ್ಯೇಂದ್ರ ಪೈ, ವಿಜಯಾ ಸೋಲಾರ್ ಕಟಪಾಡಿ ಶ್ರೀಮತಿ ಭಾರತಿ ಹರೀಶ್ ಸುವರ್ಣ, ಅಧ್ಯಕ್ಷರು ಲಯನ್ಸ್ ಕ್ಲಬ್ ಉಡುಪಿ ಅಮೃತ್ ಶ್ರೀಮತಿ ಜ್ಯೋಯಿಲಿನ್ ಪರಿಮಳ ಕರ್ಕಡ,ಮುಖ್ಯೋಪಾಧ್ಯಾಯರು ಕ್ರಿಶ್ಚಿಯನ್ ಪ್ರೌಢಶಾಲೆ ಉಡುಪಿ ಭಾಗವಹಿಸುವರು.

ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶ್ರೀ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು ತುಳುಕೂಟ ಉಡುಪಿ (ರಿ.) ಅಧ್ಯಕ್ಷತೆವಹಿಸುವರು. ಶ್ರೀ ಸಾಧು ಸಾಲ್ಯಾನ್, ಮತ್ತೋದ್ಯಮಿ ಮಲ್ಪೆ,ಶ್ರೀ ವಿಶ್ವನಾಥ್ ಶೆಣೈ, ಸಮಾಜಸೇವಕರು ಉಡುಪಿ ಡಾ.ಸುಮಾ ಎಸ್ ಪ್ರಾಚಾರ್ಯರು, ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಶ್ರೀಮತಿ ಹೆಲೆನ್ ಬಿ.ಸಾಲಿನ್ಸ್ ಮುಖ್ಯೋಪಾಧ್ಯಾಯರು ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆ ಉಡುಪಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ತುಳುನಾಡಿನ ಜಾನಪದ ಸಂಸ್ಕೃತಿಯ ತಿರುಳನ್ನು ಜನಮಾನಸಕ್ಕೆ ತಿಳಿಸುವ ಮತ್ತು ನಶಿಸಿ ಹೋದ ಕ್ರೀಡೆಗಳನ್ನು ಪುರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಯುವಜನತೆಗೆ ತುಳು ಗೊಬ್ಬುಗಳ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ 24ರಂದು ಸಂಜೆ ೪ಗಂಟೆ ತನಕ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪತ್ರಿಕಾ ಗೋಷ್ಠಿಯಲ್ಲಿ  ತುಳುಕೂಟದ ಉಪಾಧ್ಯಕ್ಷ ಭುವನ ಪ್ರಸಾದ ಹೆಗ್ಡೆ, ಸಂಚಾಲಕ ಮಹಮದ್ ಮೌಲಾ , ದಿವಾಕರ್ ಸನಿಲ್, ಭಾರತಿ ಟಿ.ಕೆ, ಯಶೋದಾ ಕೇಶವ್  ಉಪಸ್ಥಿತರಿದ್ದರು.  

ಸ್ಪರ್ಧೆಗಳವಿವರ
ಗುಂಪುವಿಭಾಗ-ಹುಡುಗರಿಗೆ ಗುಂಪುವಿಭಾಗ-ಹುಡುಗಿಯರಿಗೆ
೧.ಲಗೋರಿ- (ತಂಡದಲ್ಲಿ ಗರಿಷ್ಠ ೭ ಮಂದಿ) ೧. ಸೊಪ್ಪಾಟ- (ತಂಡದಲ್ಲಿ ಗರಿಷ್ಠ ೭ ಮಂದಿ)
೨.ಹಗ್ಗಜಗ್ಗಾಟ- (ತಂಡದಲ್ಲಿ ಗರಿಷ್ಠ ೧೦ ಮಂದಿ) ೨. ಹಗ್ಗಜಗ್ಗಾಟ- (ತಂಡದಲ್ಲಿ ಗರಿಷ್ಠ ೧೦ ಮಂದಿ)
೩.ಗೇರುಬೀಜದಾಟ- (ತಂಡದಲ್ಲಿ ಗರಿಷ್ಠ ೫ ಮಂದಿ) ೩.ಗೇರುಬೀಜದಾಟ- (ತಂಡದಲ್ಲಿ ಗರಿಷ್ಠ ೫ ಮಂದಿ)

ವೈಯಕ್ತಿಕವಿಭಾಗ-ಹುಡುಗರಿಗೆ ವೈಯಕ್ತಿಕವಿಭಾಗ-ಹುಡುಗಿಯರಿಗೆ
೧. ಗುಂಟದ ಗೊಬ್ಬು- (ಗುಂಟಾಟ) ೧. ಗುಂಟದ ಗೊಬ್ಬು- (ಗುಂಟಾಟ)
೨.ಕರದರ್ಪುನಿ:- (ಮಡಕೆ ಒಡೆಯುವುದು) ೨.ಕರದರ್ಪುನಿ:- (ಮಡಕೆ ಒಡೆಯುವುದು)
೩.ತಾರಾಯಿದ ಕಟ್ಟ-(ತೆಂಗಿನಕಾಯಿ ಅಂಕ) ೪.ಮಡಲ್ ಮುಡೆವುನಿ- (ತೆಂಗಿನಗರಿ ಹೆಣೆಯುವುದು)

*ತುಳುಕೂಟದ ಸದಸ್ಯೆರೆಗ್ ಬೊಕ್ಕಸಾರ್ವಜನಿಕೆರೆಗ್ 
೧.ತಾರಾಯಿದ ಕಟ್ಟ- (ಆಂಜೋವುಲೆಗ್ ಮಾತ್ರ) ೧.ಕೊಪ್ಪರಿಗೆ ನಾಡುನ ಗೊಬ್ಬು (ನಿಧಿ ಶೋಧ)
೨.ಕರದರ್ಪುನಿ:- (ಪೊಂಜೊವುಲೆಗ್ ಮಾತ್ರ) ೨.ಸಬಿ ಸವಾಲ್ (ತುಳು ರಸಪ್ರಶ್ನೆ)

 
 
 
 
 
 
 
 
 
 
 

Leave a Reply