ಕೃಷ್ಣ ದರ್ಶನ ಪಡೆದ ಅಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ

ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಸೂರ್ಯನಂತೆ ಜಗತ್ತಿಗೆ ಭಾರತೀಯ ತತ್ವಜ್ಞಾನದ ಬೆಳಕು ಹರಿಸುತ್ತಿದ್ದಾರೆ. ತನ್ಮೂಲಕ ಗೌರಿಶಂಕರ ಪರ್ವತಂತೆ ಕಂಗೊಳಿಸುತ್ತಿದ್ದಾರೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಾರಾ ಮೌಲ್ಯದ ಮೆರಗು ಇರುವುದು ಅವರಿಗೆ ಮಾತ್ರ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯ ಪಟ್ಟರು.

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮಂಗಳವಾರ ಆಗಮಿಸಿದ್ದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಸ್ವಾಗತಿಸಿ, ಮಠದ ಒಳಗಿನ ಚಂದ್ರಶಾಲೆಯಲ್ಲಿ ಗೌರವಿಸಿ, ಬಳಿಕ ಆಶೀರ್ವಚನ ನೀಡಿದರು.
ನಮ್ಮ ಚತುರ್ಥ ಪರ್ಯಾಯದ ಅತ್ಯಂತ ಸ್ಮರಣೀಯ ದಿನ ಇಂದು. ಕೋಟಿ ವಿಶ್ವಗಿತಾ ಪರ್ಯಾಯದ ವಿಶಿಷ್ಟ ಸಂದರ್ಭ ಗೀತಾಚಾರ್ಯನಾದ ಶ್ರೀಕೃಷ್ಣನ ದರ್ಶನಕ್ಕೆ ವಿಶ್ವಗುರುವಾಗಿ ಕಂಗೊಳಿಸುತ್ತಿರುವ ರವಿಶಂಕರ್ ಆಗಮನ ಸಂತಸ ತಂದಿದೆ. ಶ್ರೀಕೃಷ್ಣನ ಹಾಗೂ ಆಧ್ಯಾತ್ಮಿಕ ರಾಯಭಾರಿಯಾದ ಅವರು ಉಡುಪಿಗೆ ಬಂದಿರುವುದು ಶ್ರೀಕೃಷ್ಣನಿಗೂ ಸಂತಸ ತಂದಿರಬಹುದು. 
 

ಏಕೆಂದರೆ, ಭಗವದ್ಗೀತೆಯ ಸಾರವನ್ನು ಸಮಸ್ತ ಜಗತ್ತಿಗೆ ಪ್ರಸಾರ ಮಾಡುವವ ಅವರು ಶ್ರೀಕೃಷ್ಣನ ವಿಶೇಷ ಭಕ್ತರು ಎಂದರು. ಆಧ್ಯಾತ್ಮಿಕ ಮಾರ್ಗದಲ್ಲಿ ಹೇಗೆ ಜೀವನ ನಡೆಸಬೇಕು? ಎಂಬ ಕಲೆ ಯನ್ನು ಅವರು ಆರ್ಟ್ ಆಫ್ ಲಿವಿಂಗ್ ಮೂಲಕ ಜನರಿಗೆ ತಿಳಿಸಿಕೊಡುತ್ತಾರೆ. ಅದು ಆರ್ಟ್ ಆಫ್  ಲಿವಿಂಗ್ ಅಲ್ಲ, ಹಾರ್ಟ್ ಆ್ ಲಿವಿಂಗ್. ಎಲ್ಲರ ಹೃದಯದಲ್ಲಿ ಶ್ರೀಕೃಷ್ಣ ನೆಲೆಯಾಗುವಂತೆ ಅವರು ಮಾಡುತ್ತಿದ್ದಾರೆ ಎಂದು ಆಶಿಸಿದರು.

ಜಗತ್ತಿಗೆ ಶ್ರೀಕೃಷ್ಣ ಸಂದೇಶ ಸಾರಿದ ಕ್ರಾಂತಿಕಾರಿ ಸಂತ: ಪುತ್ತಿಗೆ ಶ್ರೀಗಳು ಶ್ರೀಕೃಷ್ಣನ ಜ್ಞಾನವನ್ನು ಅರೆದು ಕುಡಿದು, ಜೀರ್ಣಿಸಿ ಅದನ್ನೇ ಜೀವನದಲ್ಲಿ ಅಳವಡಿಸಿಕೊಂಡು ಸಾಗುತ್ತಿದ್ದಾರೆ. ಹೀಗಾಗಿ ಅವರು ಪ್ರಪಂಚದಲ್ಲಿ ಎಲ್ಲಿಯೇ ಹೋದರೂ ಆ ಕೃಷ್ಣನ ಕಂಪು, ತಂಪು, ಸಂಪು ಹರಡುತ್ತಲೇ ಇರುತ್ತಾರೆ ಎಂದು ಶ್ರೀ ಶ್ರೀ ರವಿಶಂಕರ್ ಹೇಳಿದರು.
ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.  

 
 
 
 
 
 
 
 
 
 
 

Leave a Reply