ಶ್ರೀಗುರು ಚಾರಿಟೇಬಲ್ ಟ್ರಸ್ಟ್ ಲೋಕಾರ್ಪಣೆ

ಪುತ್ತಿಗೆ ಪರ್ಯಾಯ ಮಹೋತ್ಸವದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ಶ್ರೀಗುರು ಚಾರಿಟೇಬಲ್ ಟ್ರಸ್ಟ್ ನ್ನು ವಿನೂತನವಾಗಿ ಉದ್ಘಾಟಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ. ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ತಂಪು ಪಾನೀಯ ಮತ್ತು ಅನ್ನ ಪ್ರಸಾದ ಸೇವೆಯ ಸರ್ವ ಜವಾಬ್ದಾರಿಯನ್ನು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಪಾಧ್ಯಕ್ಷ ಈರಪ್ಪ ಗೌಂಡಿ ವಹಿಸಿದ್ದರು.
ಶ್ರೀಗುರು ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮಾತನಾಡಿ ಇಂದು ಸಾಂಕೇತಿಕವಾಗಿ ವಿಶ್ವಗೀತಾ ಪರ್ಯಾಯ ಸಂದರ್ಭದಲ್ಲಿ  ಒಂದು ಅಳಿಲು ಸೇವೆಯನ್ನು ಸಲ್ಲಿಸುವ ಮೂಲಕ ಟ್ರಸ್ಟ್ ನ್ನು ಅಧಿಕೃತವಾಗಿ ಉದ್ಘಾಟಿಸಿದ್ದೇವೆ, ಮುಂದಿನ ದಿನಗಳಲ್ಲಿ ಈ ನಮ್ಮ ಟ್ರಸ್ಟ್ ನ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುವ ಸಂಕಲ್ಪವನ್ನು ಮಾಡಿದ್ದೇವೆ.
ಮುಖ್ಯವಾಗಿ ಉಡುಪಿ ಜಿಲ್ಲೆಯಾದ್ಯಂತ ಸಾವಿರಾರು ವೀರಶೈವ ಲಿಂಗಾಯತ ಸಮುದಾಯದ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು ಅವರ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವಸ್ಥಾನವನ್ನು ಪೂಜ್ಯ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಲಿಂಗಾ ಯತ ಸಮುದಾಯದ ದೊಡ್ಡ ಧಾರ್ಮಿಕ ಕ್ಷೇತ್ರವನ್ನು ದೇವಸ್ಥಾನಗಳ ನಾಡು ಉಡುಪಿಯಲ್ಲಿ  ಸ್ಥಾಪಿಸುವ ದೊಡ್ಡ ಯೋಜನೆಯೇ ಈ ನಮ್ಮ ಟ್ರಸ್ಟ್ ಸೃಷ್ಟಿಯಾಗಲು ಕಾರಣ ಎಂದು ಭಕ್ತಿ ಭಾವದ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಅಭಿಮಾನಿ ಬಗಳದ ಗೌರವ ಅಧ್ಯಕ್ಷ ಜನಾರ್ದನ್ ಕೊಡವೂರು, ಕೃಷ್ಣ ಶೆಟ್ಟಿಬೆಟ್ಟು, ಕಾರ್ಯಾಧ್ಯಕ್ಷ ಕುಮಾರ್ ಪ್ರಸಾದ್, ಖಜಾಂಚಿ ಬಸವರಾಜ್ ಐಹೊಳೆ, ಶ್ರೀಗುರು ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕಿ ಉಮಾ ಸಿದ್ದಬಸಯ್ಯ, ಕಾರ್ಯದರ್ಶಿ ಮಹೇಶ್ ಗುಂಡಿಬೈಲು, ವಿಠ್ಠಲ್ ಗೌಡರ್, ಶರಣಪ್ಪ ಬಾರಕೇರ್, ಶಿವರಾಜ್ ಗುಂಜಿ,ಆನಂದ್ ಸರ್ವ ಸದಸ್ಯರು ಸೇರಿ ಸೇವೆ ಯನ್ನು ಸಲ್ಲಿಸಿದರು.
 
 
 
 
 
 
 
 
 
 
 

Leave a Reply