ಕೊಡವೂರು ಬ್ರಾಹ್ಮಣ ಮಹಾಸಭಾ ವತಿಯಿಂದ ವರಮಹಾಲಕ್ಷ್ಮೀ ವ್ರತ ಸಂಪನ್ನ

ರಜತೋತ್ಸವವನ್ನು ಆಚರಿಸುತ್ತಿರುವ ಕೊಡವೂರು ಬ್ರಾಹ್ಮಣ ಮಹಾಸಭಾ, “ರಜತ ಪಥದಲ್ಲಿ ವಿಪ್ರ ಹೆಜ್ಜೆ”  ಸರಣಿ ಕಾರ್ಯಕ್ರಮದಲ್ಲಿ 13 ನೇ ಕಾರ್ಯಕ್ರಮವಾಗಿ  “ಶ್ರೀ ವರ ಮಹಾಲಕ್ಷ್ಮೀ ವ್ರತಾಚರಣೆ” ಯನ್ನು  ಕಂಬಳಕಟ್ಟ ಶಿವರಾಜ ಉಪಾಧ್ಯಾಯರ ನೇತ್ರತ್ವದಲ್ಲಿ ಹಾಗೂ ಸಮಿತಿಯ ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಭಟ್ ರವರ ಸಂಯೋಜನೆಯಲ್ಲಿ ಕೊಡವೂರಿನ “ವಿಪ್ರಶ್ರೀ” ಸಾಂಸ್ಕ್ರತಿಕ ಕಲಾಭವನದಲ್ಲಿ  ಬಹು ವಿಜ್ರಂಭಣೆಯಿಂದ ನಡೆಯಿತು. 

ವರ ಮಹಾಲಕ್ಷ್ಮೀ ವ್ರತದ ಮಹತ್ವದ ಬಗ್ಗೆ  ಶಿವರಾಜ ಉಪಾಧ್ಯರಿಂದ  ಪ್ರವಚನ ನಡೆಯಿತು.  ಸಮಾಜದ ನೂರಾರು ಮಹಿಳೆಯರು ಲಕ್ಷ್ಮೀ ಶೋಭಾನೆ ಹಾಗು ಭಜನಾ ಸಂಕೀರ್ತನೆಯೊಂದಿಗೆ ಈ ವೃತದಲ್ಲಿ ಪಾಲ್ಗೊಂಡು ಮಹಾಲಕ್ಷ್ಮಿ ದೇವಿಯನ್ನು ಪುಷ್ಪಾರ್ಚನೆಯೊಂದಿಗೆ ಆರಾಧಿಸಿ ಪ್ರಸಾದ ಸ್ವೀಕರಿಸಿದರು. 

ಈ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗಾಗಿ  “ಅತ್ಯುತ್ತಮ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆ” ಎಂಬ ಸ್ಪರ್ಧೆ ನಡೆಯಿತು ಮತ್ತು ವಿಜೇತರಾದ ಶ್ರೀಮತಿ ರಮಾ ಎಲ್ ಭಟ್, ವಿಜಯಾ ದಿನೇಶ್,  ಪೂರ್ಣಿಮಾ ಜನಾರ್ದನ್, ದೀಪಾ ರಾಮಕೃಷ್ಣ, ಪವಿತ್ರ ಸಾಮಗ ಹಾಗೂ ಕೌಸ್ತುಭ ಚಂದನ್ ರವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ, ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ಬಲ್ಲಾಳ್ ಮತ್ತು ರಜತೋತ್ಸವ ಸಮಿತಿಯ ಇತರ ಪದಾಧಿಕಾರಿಗಳು  ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply