ಅಂತರ್ಜಾಲದಲ್ಲಿ ಕೈತೋಟ ಮಾಹಿತಿ

ಮಣಿಪಾಲ: ಭಾರತೀಯ ವಿಕಾಸ ಟ್ರಸ್ಟ್  ಮತ್ತು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತಾಶ್ರಯದಲ್ಲಿ ತರಕಾರಿ ಬೆಳೆ ಮತ್ತು ಟೆರೇಸ್ ಗಾರ್ಡನಿಂಗ್ ನಿರ್ವಹಣೆ ಕುರಿತ ಅಂತರ್ಜಾಲ ತರಬೇತಿ ಈಚೆಗೆ ನಡೆಯಿತು.
ಸಂಪನ್ಮೂಲವ್ಯಕ್ತಿಯಾಗಿದ್ದ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಮಖ್ಯಸ್ಥ ಮತ್ತು ಹಿರಿಯ ವಿಜ್ಞಾನಿ ಡಾ. ಧನಂಜಯ, ಮನೆಯಂಗಳದಲ್ಲಿ ಬೆಳೆಸಬಹುದಾದ ತರಕಾರಿ ಬೆಳೆ ಕುರಿತು ಮಾಹಿತಿ ನೀಡಿದರು. ಮಾರುಕಟ್ಟೆಯಲ್ಲಿ ಲಭಿಸುವ ಅಪಾಯಕಾರಿ ಕೀಟನಾಶಕ ಬಳಸಿದ ತರಕಾರಿ ಸೇವನೆಗಿಂತ ಮನೆಯಂಗಳದಲ್ಲಿ ಬೆಳೆದ ತರಕಾರಿ ಬಳಕೆ ಉತ್ತಮ ಎಂದರು.
ಕೇಂದ್ರದ ಇನ್ನೋರ್ವ ವಿಜ್ಞಾನಿ ಡಾ. ಚೈತನ್ಯ, ತಾರಸಿ ಕೃಷಿ ಬಗ್ಗೆ ಮಾಹಿತಿ ನೀಡಿದರು. ಗಿಡಗಳಿಗೆ ನೀರು, ಗೊಬ್ಬರ, ರೋಗ ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕ ಶಿರ್ವ ಎಂ. ರಾಮಚಂದ್ರ ಪೈ ಸಾವಯವ ಕೈತೋಟ ಬಗ್ಗೆ ಅನುಭವ ಹಂಚಿಕೊಂಡರು.
ಅಂತರ್ಜಾಲ ತರಬೇತಿಯಲ್ಲಿ ಭಾಗವಹಿಸಿದ ರಾಜ್ಯದ ಅನೇಕ ಆಸಕ್ತರು ತಜ್ಞರಿಂದ ಮಾಹಿತಿ ಪಡೆದುಕೊಂಡರು.
ಬಿವಿಟಿ ವ್ಯವಸ್ಥಾಪಕ ಅರುಣ್ ಪಟವರ್ಧನ್ ಸ್ವಾಗತಿಸಿ, ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ವಂದಿಸಿದರು

 
 
 
 
 
 
 
 
 
 
 

Leave a Reply