ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಾಶಿ ಪೂಜಾ ಮೊಹೋತ್ಸವ

ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ರಾಶಿ ಪೂಜಾ ಮೊಹೋತ್ಸವ ಸೋಮವಾರ  ಮುಂಜಾನೆ 5.53 ರ ಮೀನ ಲಗ್ನ ದಲ್ಲಿ ಆರಂಭ ಗೊಂಡ ರಾಶಿಪೂಜೆಯ  ಧಾರ್ಮಿಕ ಪೂಜಾ ವಿಧಾನಗಳಾದ  ಕಲಶಾಭಿಷೇಕ, ಪ್ರಸನ್ನ ಪೂಜೆ, ಬಲಿಪೂಜೆ, ವಸಂತಪೂಜೆ, ನರ್ತನಸೇವೆ, ಸಂಕೀರ್ತನೆ, ಭಜನೆ  , ವಾದ್ಯ ಹಾಗೂ ಚಂಡೆ ವಾದನ, ಮೊದಲಾದ ಕಾರ್ಯಕ್ರಮ ನಿರಂತರ ಅಹೋರಾತ್ರಿಯಿಂದ, ಮಂಗಳವಾರ ಮುಂಜಾನೆ  5.53 ರ ಕುಂಭ ಲಗ್ನ ದ ವರೆಗೂ ನಿರಂತರ  ಸಾವಿರಾರು ಭಕ್ತರ ಸಮುಖದಲ್ಲಿ ಭಕ್ತಿ ಸಡಗರದಿಂದ ನಡೆಯಿತು. 

 ಧಾರ್ಮಿಕ ಪೂಜಾ ವಿಧಾನಗಳನ್ನು ಪಾಡಿಗಾರು ವಾಸುದೇವ ತಂತ್ರಿ  ಮಾರ್ಗದರ್ಶನದಲ್ಲಿ ಅರ್ಚಕ ವೃಂದದವರು ರಾಶಿಪೂಜೆ ನೆರವೇರಿಸಿದರು.  ಶ್ರೀ ದೇವರಿಗೆ  ಶ್ರೀದೇವಿ ಭೂದೇವಿ ಸಹಿತ ವಿಶೇಷ ಅಲಂಕಾರ, ದೇವಾಲಯವನ್ನು ವಿಶೇಷ ಹಣ್ಣು  ಹೂವುಗಳಿಂದ ಅಲಂಕಾರ.
ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಕಾಣಿಯೂರು ಮಠ, ಶ್ರೀ ಆನೆಗುಂದಿ ಸಂಸ್ಥಾನ ಶ್ರೀ ಕಾಳಹಸ್ತಿ ಸರಸ್ವತಿ ಸ್ವಾಮೀಜಿ , ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು  ಪೇಜಾವರ ಮಠ ಉಡುಪಿ  ಭೇಟಿ ನೀಡಿ ಭಕ್ತರನ್ನು ಅನುಗ್ರಹಿಸಿದರು.  ನಗರಸಭಾ ಅಧ್ಯಕ್ಷೆ ಸುಮಿತ್ರ ನಾಯಕ್ , ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು ಭೇಟಿ ನೀಡಿದರು.                                                                                                                                                                                                                                                                    ದೇವಸ್ಥಾನ ದೇವಳದ ಆಡಳಿತ ಮಂಡಳಿಯ ಮೊಕ್ತೇಸರ ಶಾಸಕ ರಘುಪತಿ ಭಟ್, ರಮೇಶ್ ಬಾರಿತ್ತಾಯ, ದಿವಾಕರ್ ಐತಾಳ್, ನಗರ  ಸಭಾ ಸದಸ್ಯರಾದ  ಪ್ರಾಭಾಕರ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಗಿರಾಧರ್ ಆಚಾರ್ಯ, ವಿಠಲ್  ಶೆಟ್ಟಿ, ಪೆರಂಪಳ್ಳಿ ವಾಸುದೇವ ಭಟ್, ಪ್ರೇಮಾನಂದ ಆಚಾರ್ಯ, ಕೃಷ್ಣರಾಜ ಭಟ್, ಹರೀಶ್ ಆಚಾರ್ಯ ಜಯಾ ಭಟ್, ಸರಸ್ವತಿ ಬಾರಿತ್ತಾಯ, ಶಿಲ್ಪಾ ಆರ್ ಭಟ್,  ಜಗದೀಶ ಪಾಲನ್, ಯು ಬಿ ಅಜಿತ್ ಕುಮಾರ್, ಕಿಶೋರ್ ಯಾದವ ಆಚಾರ್ಯ,   ಕರಂಬಳ್ಳಿ ಐತಾಳ್  ಕುತುಂಬಸ್ಥರು,  ದೇವಳದ ಆಡಳಿತ ಮಂಡಳಿಯ ಸದಸ್ಯರು, ಊರಿನ ಹತ್ತು ಸಮಸ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತ ರಿದ್ದರು 
 
 
 
 
 
 
 
 
 
 
 

Leave a Reply