ಮಾರ್ಪಳ್ಳಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಮಹೋತ್ಸವವು

ಫೆ.17 ರಿಂದ ವಾರ್ಷಿಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.  ಫೆ.18 ರಂದು ಬೆಳಿಗ್ಗೆ 6 ಗಂಟೆಗೆ  ಏಕಾದಶ ರುದ್ರಾಭಿಷೇಕ, 9 ಗಂಟೆಗೆ ಮೀನ ಲಗ್ನದಲ್ಲಿ ಧ್ವಜಾರೋಹಣ ನಡೆಯಲಿದೆ. ಸಂಜೆ 5.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ರಾತ್ರಿ 7 ಗಂಟೆಗೆ ರಂಗ ಪೂಜೆ ನಡೆಯಲಿದೆ.
ಫೆ.19 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ನಾಗ ದೇವರ ಪ್ರೀತ್ಯಾರ್ಧ ವಾಗಿ ಆಶ್ಲೇಷಾ ಬಲಿ ಮತ್ತು ನಾಗ ಸಂದರ್ಶನ ನಡೆಯಲಿದೆ. ಸಂಜೆ 5 ಗಂಟೆಗೆ ಮೂಡು ಸವಾರಿಕಟ್ಟೆ ಪೂಜೆ ನಡೆಯಲಿದ್ದು, ಸಂಜೆ 6.30 ರಿಂದ ” ಶ್ರೀ ರಾಮದರ್ಶನ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ​​
ಫೆ.20 ರಂದು ಬೆಳಿಗ್ಗೆ 10 ಗಂಟೆಗೆ ರಥಾಧಿವಾಸ ಹೋಮ, ಮಹಾ ಪೂಜೆ, ರಥಶುದ್ಧಿ ರಥೋತ್ಸವ ಹಾಗೂ ಮಧ್ಯಾಹ್ನ 12.30 ರಿಂದ 2.30 ರ ವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30 ಕ್ಕೆ ” ವಿರೋಚನ ಕಾಳಗ ” ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ರಾತ್ರಿ 8 ಗಂಟೆಗೆ ಮಹಾ ರಥೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ  ತಿಳಿಸಲಾಗಿದೆ.​
 
 
 
 
 
 
 
 
 
 
 

Leave a Reply