ಕಲ್ಮಾಡಿ ಶ್ರೀ ಬಗ್ಗು ಪಂಜುರ್ಲಿ ದೈವಸ್ಥಾನ ‌ ಭೂಮಿಪೂಜೆ, ಶಿಲಾನ್ಯಾಸ

ಕಲ್ಮಾಡಿ ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದಲ್ಲಿ ದೇವಾಡಿಗ ಸಮಾಜ ಬಾಂಧವರು ಬಗ್ಗು ಪಂಜುರ್ಲಿ ಮೂಲಕ್ಷೇತ್ರ ಮೇಲ್ಛಾವಣಿ ನಿರ್ಮಾಣ ಸಮಿತಿಯನ್ನು ರಚಿಸಿಕೊಂಡು ದೈವಸ್ಥಾನದ ಹೊರಾಂಗಣಕ್ಕೆ ಸುಮಾರು 36 ಲಕ್ಷ ರೂಪಾಯಿ ವೆಚ್ಚದಲ್ಲಿ ಮೇಲ್ಚಾವಣಿ ನಿರ್ಮಿಸಲು ನಿರ್ಧರಿಸಿದ ನಿಟ್ಟಿನಲ್ಲಿ ಅದರ ನಿರ್ಮಾಣ ಕಾರ್ಯ ಆರಂಭಿಸುವ ಪೂರ್ವಭಾವಿಯಾಗಿ ಭೂಮಿಪೂಜೆ, ಶಿಲಾನ್ಯಾಸದ ವಿಧಿವಿಧಾನಗಳು ಜ.24 ರಂದು ನೆರೆವೇರಿತು.

 

ಈ ಸಂದರ್ಭದಲ್ಲಿ ಮೇಲ್ಚಾವಣಿ ನಿರ್ಮಾಣ ಸಮಿತಿ ಅಧ್ಯಕ್ಷ ಧರ್ಮಪಾಲ್.ಯು.ದೇವಾಡಿಗ, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ನಗರಸಭಾ ಸದಸ್ಯ ವಿಜಯ ಕೊಡವೂರು, ಸಾನಿಕ ಚಂದ್ರಶೇಖರ್ ಸೇರಿಗಾರ್ ಬಗ್ಗು ಮನೆ, ರಾಜ ಸೇರಿಗಾರ್ ಕೊಡವೂರು, ಆಡಳಿತ ಸಮಿತಿಯ ಪದಾಧಿಕಾರಿಗಳಾದ ಸತೀಶ್ ಕೊಡವೂರು, ದಯಾಕರ್.ವಿ.ಸುವರ್ಣ, ಶೇಖರ್ ಕೋಟ್ಯಾನ್, ರೋಹಿತ್ ಸುವರ್ಣ, ಮೇಲ್ಚಾವಣಿ ನಿರ್ಮಾಣ ಸಮಿತಿಯ ಪದಾಧಿಕಾರಿಗಳಾದ ಗಣೇಶ್ ದೇವಾಡಿಗ ಅಂಬಲಪಾಡಿ, ಸುರೇಶ್ ಕೊಡವೂರು, ಸುದರ್ಶನ್ ಸೇರಿಗಾರ್, ರತ್ನಾಕರ್ ಜಿ.ಎಸ್, ದೇಜು ಸೇರಿಗಾರ್,

 

ಸುಂದರ ಮೊಯ್ಲಿ, ಚೆನ್ನಪ್ಪ ಮೊಯ್ಲಿ, ಸಂಜೀವ ದೇವಾಡಿಗ ಚಿಟ್ಪಾಡಿ (ಮುಂಬಯಿ), ರವಿ.ಎಸ್.ದೇವಾಡಿಗ ಮುಂಬಯಿ, ನಾರಾಯಣ ಸೇರಿಗಾರ್ ಕುಕ್ಕಿಕಟ್ಟೆ, ಸದಾನಂದ ಸೇರಿಗಾರ್ ಕಾವೂರು, ಇಂಜಿನಿಯರ್ ಅಜಿತ್ ಎಳ್ಳಾರೆ, ಅಶೋಕ್ ಸೇರಿಗಾರ್ ಬಗ್ಗುಮನೆ,ನವೀನ್ ಸೇರಿಗಾರ್ ಬಗ್ಗುಮನೆ, ಶ್ರೀಕಾಂತ್ ಸೇರಿಗಾರ್ ಕಟಪಾಡಿ, ಸುಜಾತ ಧರ್ಮ ಪಾಲ್ ದೇವಾಡಿಗ, ಕಮಲ ಸೇರಿಗಾರ್ತಿ ಕೊಡವೂರು, ಸರಸ್ವತಿ ಸೇರಿಗಾರ್ತಿ ಬಗ್ಗು ಮನೆ ಹಾಗು ಬಗ್ಗುಮೊಯ್ಲಿದಿ ಕುಟುಂಬಿಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply