ಕರೋನಾಸುರನ ಆರ್ಭಟ ದಿಂದ ಇನ್ನಾದರೂ ಮುಕ್ತ ವಾಗಲಿದೆಯೇ  ಶ್ರೀಕೃಷ್ಣಮಠ.

ಉಡುಪಿಯ ಶ್ರೀ ಕೃಷ್ಣ ಮಠ 6 ತಿಂಗಳ ಬಳಿಕ ಭಕ್ತರಿಗೆ ತೆರೆದುಕೊಳ್ಳುವ ಸಾಧ್ಯತೆ ಇದೆ,  ಜೂನ್-8ರಿಂದ  ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೇವಲ ದರ್ಶನ ಮಾತ್ರ ಸಾಧ್ಯವಾಗಿತ್ತು. ಸೇವೆಗಳು ಇರಲಿಲ್ಲ. ಇದೀಗ ಸೆಪ್ಟಂಬರ್ 1ರಿಂದ ಸೇವೆಗಳನ್ನು ಸ್ವೀಕರಿಸಲು ಇಲಾಖೆ ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ಸೇವೆಗಳು ಆರಂಭ ಗೊಂಡಿವೆ.

ಕೊರೋನಾ ಸೋಂಕು ವಿಸ್ತರಣೆಯಾಗು ತ್ತಲೇ ಇದ್ದ ಕಾರಣ ಶ್ರೀಕೃಷ್ಣಮಠದಲ್ಲಿ ಸಾರ್ವಜನಿಕರ, ಭಕ್ತರ ಪ್ರವೇಶ ನಿರ್ಬಂಧ ವನ್ನು ಮುಂದುವರಿಸಲಾಗಿತ್ತು. ಶ್ರೀಕೃಷ್ಣ ಜಯಂತಿ, ವಿಟ್ಲಪಿಂಡಿ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಮಾತ್ರ ನೆರವೇರಿಸ ಲಾಗಿತ್ತು.

ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಜನವರಿ 18ರಂದು ಅಧಿಕಾರ ವಹಿಸಿಕೊಂಡ ಬಳಿಕ ದೇವರ ದರ್ಶನ ಮಾಡುವ ಮಾರ್ಗ ಬದಲಾಯಿಸಿದ್ದರು. ಕೊರೋನಾ ಅವಧಿ ಯಲ್ಲಿ ಸಂಪೂರ್ಣ ಬಂದ್ ಮಾಡಿದ್ದರಿಂದ ದರ್ಶನ ಮಾಡುವ ಮಾರ್ಗೋಪಾಯ ವ್ಯಸ್ಥೆಗೊಳಿಸಲಾಗಿದೆ.

ಕೃಷ್ಣಮಠದ ರಾಜಾಂಗಣ ಬಳಿಯಿಂದ ಭೋಜನಶಾಲೆ ಉಪ್ಪರಿಗೆ ಮಾರ್ಗವಾಗಿ ತೆರಳಿ ಅಲ್ಲಿಂದ ಶ್ರೀಕೃಷ್ಣಮಠ ಗರ್ಭಗುಡಿ ಹೊರಾಂಗಣಕ್ಕಿಳಿದು, ಅಲ್ಲಿಂದಲೇ ದೇವರ ದರ್ಶನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಒಳ ಬರಲು ಒಂದು ದಾರಿಯಾದರೆ ಹೊರಹೋಗಲು ಇನ್ನೊಂದು ದಾರಿ ಇದೆ.

ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸುತ್ತಿ ರುವುದುರಿಂದ ಉಡುಪಿಯಲ್ಲಿ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ಬೆಡ್ ಗಳು ಭರ್ತಿ ಯಾಗಿರುವುದರಿಂದ, ಸಾರ್ವಜನಿಕರ ಪ್ರವೇಶ ನಿರ್ಬಂಧಿಸುವ ಅಧಿಕಾರ  ಸ್ವಾಮೀಜಿಯವರಿಗೆ ಇದ್ದರೂ,  ಸರಕಾರದ ನಿಯಮಗಳಿಗೆ ಬದ್ಧವಾಗಿ ಭಕ್ತರಿಗೆ ತೆರೆಯುವ ಸಾಧ್ಯತೆ ಇದೆ ಎಂದು ಹೇಳಲಾ ಗುತ್ತಿದೆ.

ಸೆಪ್ಟೆಂಬರ್ 21ರಿಂದ ದರ್ಶನ ಅವಕಾಶ ಕಲ್ಪಿಸಲಾಗುವುದು ಎಂಬ ಸುಳಿವು ಇದೆ. ಆದರೆ ಇತರ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆಯೇ,  ಭೋಜನ ಪ್ರಸಾದ ಆರಂಭವಾಗುವುದೇ  ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

 
 
 
 
 
 
 
 
 
 
 

Leave a Reply