ಕಣ್ಣು ರಾಷ್ಟ್ರೀಯ ಆಸ್ತಿ ವಿಜಯ್ ಕೊಡವೂರು ಮನವಿ.

ನಮ್ಮ ದೇಶ ಪ್ರಪಂಚಕ್ಕೆ ಮಾದರಿಯಾಗಿದೆ ಪ್ರಪಂಚಕ್ಕೆ ಸಂಸ್ಕಾರ ಕೊಟ್ಟಿದೆ, ಬದುಕುವ ರೀತಿಯನ್ನು ಕಳಿಸಿದೆ ಪ್ರಪಂಚಕ್ಕೆ ದಿಕ್ಕು ತೋರಿಸುವ ಗುರುವಿನ ಸ್ಥಾನದಲ್ಲಿ ಆದರೆ ಕಾರ್ನಿಯ ಸಮಸ್ಯೆಗೆ ಮಾತ್ರ ನಾವು ಸರಿಯಾದ ಯೋಚನೆ ಮಾಡಿ ಹೆಜ್ಜೆ ಇಡಬೇಕಾಗಿದೆ.

ಅಂದಾಜು 1ಕೋಟಿ 40 ಲಕ್ಷ ಜನರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅದನ್ನು ನಾವು ಸರಿಪಡಿಸಲು ಸಾಧ್ಯವಿಲ್ಲ.
ಆದರೆ ಅಂದಾಜು 30 ಲಕ್ಷ ಜನರು ಕಾರ್ನಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.ನಾವು ಮನಸ್ಸು ಮಾಡಿದರೆ ನಮ್ಮ ಇಚ್ಛಾಶಕ್ತಿ ಇದ್ದರೆ ಕೇವಲ 25 ದಿನಗಳಲ್ಲಿ ನಮ್ಮ ದೇಶದಲ್ಲಿ ಕಾರ್ನಿಯ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ ನಾವು ನಮ್ಮ ಕಣ್ಣುಗಳನ್ನು ದಾನ ಮಾಡಬೇಕಾಗಿದೆ.ನಮ್ಮ ನಿಧನದ ನಂತರ ನಮ್ಮ ಕಣ್ಣು ಇನ್ನಿಬ್ಬರ ಜೀವನಕ್ಕೆ ದಾರಿ ತೋರಿಸಲಿದೆ ಅವರ ಜೀವನ ಬೆಳಗುತ್ತದೆ. ಇದು ಆಗಬೇಕಾದರೆ ನಾವೆಲ್ಲರೂ ಕಣ್ಣುದಾನ ಮಾಡಬೇಕಾಗಿದೆ ಮತ್ತು ನಮ್ಮ ಮೋದಿ ಸರಕಾರವು ಕಣ್ಣನ್ನು ರಾಷ್ಟ್ರೀಯ ಆಸ್ತಿಯಾಗಿ ಘೋಷಣೆ ಮಾಡಬೇಕಾಗಿದೆ ಎಂದು ವಿಜಯ್ ಕೊಡವೂರು ಮನವಿ ಮಾಡಿದರು.

ಶ್ರೀಲಂಕಾ ದೇಶದಲ್ಲಿ ಕಣ್ಣು ರಾಷ್ಟ್ರೀಯ ಆಸ್ತಿಯನ್ನು ಘೋಷಣೆ ಮಾಡಿದ್ದರಿಂದ ದೇಶದಲ್ಲಿ ಕಾರ್ನಿಯ ಸಮಸ್ಯೆಯಿಲ್ಲ ಬದಲಾಗಿ ಅವರು ಬೇರೆ ದೇಶಗಳಿಗೆ ಕಣ್ಣನ್ನು ದಾನ ಮಾಡುತ್ತಿದ್ದಾರೆ ಮತ್ತು ಅಮೇರಿಕದಂತಹ ದೊಡ್ಡ ದೊಡ್ಡ ದೇಶಗಳಿಗೆ ಕಣ್ಣುಗಳನ್ನು ದಾನ ಮಾಡುತ್ತಿದ್ದಾರೆ ಆದ್ದರಿಂದ ಭಾರತದಲ್ಲಿ ಕಣ್ಣು ರಾಷ್ಟ್ರೀಯ ಆಸ್ತಿ ಎಂದು ಮಾನ್ಯ ಪ್ರಧಾನ ಮಂತ್ರಿಗಳು ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.

ನಾವು ನಾವು ಕುಟುಂಬ ಸಮೇತರಾಗಿ ನಮ್ಮ ಕಣ್ಣುಗಳನ್ನು ದಾನ ಮಾಡುವ ಅವಶ್ಯಕತೆ ಇದೆ ಎಂದು ಕುಂದಾಪುರದ ಶನೀಶ್ವರ ದೇವಸ್ಥಾನದಲ್ಲಿ ನಡೆದ ಉಚಿತ ಕನ್ನಡಕ ವಿತರಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸೆ ಕಾರ್ಯಕ್ರದಲ್ಲಿ ವಿಜಯ ಕೊಡವೂರು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರವಿ ದೇವಾಡಿಗ, ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply