ರಾಜ್ಯ ಸರಕಾರಕ್ಕೆ ಭರ್ಜರಿ  ಆಫರ್ ಕೊಟ್ಟ ಶಾಸಕ ಜಮೀರ್  

ಬೆಂಗಳೂರು: ಡ್ರಗ್ಸ್​ ಮಾಫಿಯಾದಲ್ಲಿ ತನ್ನ ಹೆಸರನ್ನು ಪ್ರಸ್ತಾಪಿಸಿರುವ ಪ್ರಶಾಂತ್​ ಸಂಬರಗಿ ಯಾರೆಂದು ನನಗೆ ಗೊತ್ತೇ ಇಲ್ಲ ಎಂದಿರುವ ಶಾಸಕ ಜಮೀರ್​ ಅಹ್ಮದ್​, ಡ್ರಗ್ಸ್ ಕೇಸ್​ನಲ್ಲಿ ನನ್ನ ಕೈವಾಡ ಇರುವುದು ಸಾಬೀತು ಮಾಡಲಿ. ಒಂದು ವೇಳೆ ಆರೋಪ ಸಾಬೀತಾದ್ರೆ ರಾಜ್ಯದಲ್ಲಿರುವ ನನ್ನ ಎಲ್ಲ ಆಸ್ತಿಯನ್ನೂ ಸರ್ಕಾರಕ್ಕೇ ಬರೆದುಕೊಡುವೆ ಎಂದು ಸವಾಲು ಹಾಕಿದ್ದಾರೆ.

ಶೇಖ್ ಫಾಸಿಲ್ ಫಜೀಲ್ ನನಗೆ ಗೊತ್ತು. ಆತ ನಾಲ್ಕು ವರ್ಷಗಳಿಂದ ನನ್ನ ಜತೆ ಇಲ್ಲ. ಯಾರೋ ಒಬ್ಬರು ನನ್ನ ಜತೆ ನಿಂತು ಫೋಟೋ ತೆಗೆಸಿಕೊಂಡಾಕ್ಷಣ ಅವರು ಮಾಡಿದ ಕೆಲಸಕ್ಕೆಲ್ಲ ನಾನು ಜವಾಬ್ದಾರನಲ್ಲ. ಇನ್ನು ಸಂಜನಾ ಯಾರೆಂದು ಗೊತ್ತಿಲ್ಲ. ನೇರವಾಗಿ ಅವರನ್ನೂ ಭೇಟಿಯಾಗಿಲ್ಲ. ಅಂದ ಮೇಲೆ ಶ್ರೀಲಂಕಾಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ತನಿಖೆ ಮಾಡ್ಲಿ.. ಫಾಸಿಲ್​ನ ಫೋನ್ ಕಾಲ್ ರೆಕಾರ್ಡ್ ತೆಗೆಸಲಿ. ತನಿಖೆ ನಡೆಸಲಿ, ಸಂಪೂರ್ಣ ಸಹಕಾರ ಕೊಡ್ತೀನಿ.  ಸೂಕ್ತ ತನಿಖೆ ಮಾಡಲಿ ಎಂದು ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply