Janardhan Kodavoor/ Team KaravaliXpress
26.6 C
Udupi
Monday, June 27, 2022
Sathyanatha Stores Brahmavara

ಸಂಸ್ಕೃತಿ ವಿಶ್ವ ಪ್ರತಿಷ್ಠಾನ~ಸಂವಿಪ್ರ ಸಂಭ್ರಮ-2020

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯಿಂದ ಇದೇ ಬರುವ ಸೆಪ್ಟೆಂಬರ್ 15ರಿಂದ 23ರವರೆಗೆ ಸಂವಿಪ್ರ ಸಂಭ್ರಮ- 2020 ನಡೆಯಲಿದೆ.  ಮೊದಲನೆಯ ದಿನ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಅಜೇರು ಹಾಡಿದ ‘ಯಾರೆ ನೀನು ಮೋಹನಂಗಿ’  ಎಂಬ ವಿನೂತನ ಯಕ್ಷ ನಾಟ್ಯ ಪ್ರಸಾರಗೊಳ್ಳಲಿದೆ.

ದಿನಾಂಕ 16 ರಿಂದ 22ರ ವರೆಗೆ  ಕಥಾ ಸಪ್ತಾಹ ನಡೆಯಲಿದ್ದು ,ಕನ್ನಡ ನಾಡಿನ ಶ್ರೇಷ್ಠ ಕಥೆಗಾರರ ಕಥೆಗಳನ್ನು  ಅಹಲ್ಯ ಬಲ್ಲಾಳ್ ಮುಂಬೈ, ಜೀವನ್ ರಾಂ ಸುಳ್ಯ, ಡಾ ಕಾತ್ಯಾಯಿನಿ ಕುಂಜಿಬೆಟ್ಟು , ಶಶಿರಾಜ್ ಕಾವೂರು, ಗಣೇಶ್  ಮಂದರ್ತಿ  ಬಿಂದು ರಕ್ಷಿದಿ, ದಿಶಾ ರಮೇಶ್ ಮೈಸೂರು ಇವರು ವಾಚಿಸಲಿದ್ದಾರೆ. 23ರಂದು ಸಂಸ್ಥೆಯ ವೆಬ್ಸೈಟ್ ಉದ್ಘಾಟನೆಗೊಳ್ಳಲಿದ್ದು, ಉಡುಪಿ ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್ ಹರೀಶ್ಚಂದ್ರ ಅವರು ಉದ್ಘಾಟಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6ರಿಂದ ಸಂಸ್ಥೆಯ ಯೂಟ್ಯೂಬ್ ಹಾಗೂ ಫೇಸ್ಬುಕ್ ಚಾನೆಲ್ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಸಂಪರ್ಕ : ರವಿರಾಜ್ ಎಚ್ ಪಿ , 9845240309

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!