ಮೈನವಿರೇಳಿಸುವಂತಿದೆ ರಿಷಭ್‌ ಶೆಟ್ಟಿ ಕಂಬಳ ಓಡಿಸುವ ದೃಶ್ಯ!

ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾ ಕಾಂತಾರ  ರಿಲೀಸ್‌ಗೆ ರೆಡಿಯಾಗಿದೆ. ಸೆಪ್ಟೆಂಬರ್​ 30ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ರಿಲೀಸ್​ ಆಗಿರುವ ಟ್ರೇಲರ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ.

ಈ ಚಿತ್ರದಲ್ಲಿ ರಿಷಭ್‌ ಶೆಟ್ಟಿಯವರು ಕಂಬಳ ಸ್ಪರ್ಧೆಯ ದೃಶ್ಯಗಳಲ್ಲಿ ನಟಿಸಿದ್ದಾರೆ. ಆ ಸನ್ನಿವೇಶಕ್ಕಾಗಿ ಅವರು ನಿಜವಾಗಿಯೂ ಕಂಬಳದ ಕೋಣಗಳನ್ನು ಓಡಿಸುವುದು ಕಲಿತಿದ್ದಾರೆ. ಕರಾವಳಿ ಸೊಗಡಿನ ಕಂಬಳ ಕ್ರೀಡೆ ಜೊತೆಗೆ ಊರು ಮತ್ತು ಅರಣ್ಯ ಇಲಾಖೆಯ ಬಗೆಗಿನ ಕಥೆ ಆಧರಿಸಿರೋ ಕಾಂತಾರ ಚಿತ್ರದ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ರಿಷಬ್​ ಶೆಟ್ಟಿ ಅವರು ಕಂಬಳದ ಕೋಣಗಳನ್ನು ಓಡಿಸುವುದನ್ನು ಕಲಿತಿದ್ದು ಕೆಲವೇ ದಿನಗಳಲ್ಲಿ ಎಂಬುದು ಗಮನಾರ್ಹ ವಿಚಾರ. ಕೆಸರು ಗದ್ದೆಯಲ್ಲಿ ಅವರು ಹಾಕಿದ ಪರಿಶ್ರಮದ ಬಗ್ಗೆ ಇಂಚಿಂಚೂ ವಿವರ ನೀಡುವಂತಹ ವಿಡಿಯೋವನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಬಿಡುಗಡೆ ಮಾಡಿದೆ.

 
 
 
 
 
 
 
 
 
 
 

Leave a Reply