ಗೋಪೂಜೆ ವೇಳೆ ಚಿನ್ನದ ಸರ ನುಂಗಿದ ಹಸು!

 ದೀಪಾವಳಿ ಗೋಪೂಜೆ ವೇಳೆ ಹಸುವೊಂದು ಚಿನ್ನದ ಸರ ಗುಳುಂ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಠ್ಠಳ್ಳಿ ಸಮೀಪ ನಡೆದಿದೆ.

 ಊರ ತೋಟ ರಾವ ರಾಮಪ್ಪ ಹೆಗಡೆ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ದಿನ ಹಸುವಿಗೆ ಗೋಪೂಜೆ ಮಾಡುತ್ತಿದ್ದ ವೇಳೆ ರಾಮಪ್ಪ ಹೆಗಡೆ ಅವರು ಚಿನ್ನದ ಸರವನ್ನು ತಂದು ಹಸುವಿನ ಸಮೀಪ ವೀಳ್ಯದೆಲೆ ಮೇಲೆ ಇಟ್ಟಿದ್ದರು. ಕ್ಷಣಾರ್ಧದಲ್ಲಿ ಎಲೆ ಸಮೇತ ಹಸು ಚಿನ್ನದ ಸರವನ್ನು ನುಂಗಿದೆ. ಆದರೆ ಸಗಣಿಯಲ್ಲಿ ಮತ್ತೆ ಚಿನ್ನದ ಸರ ಹೊರಗೆ ಬಂದಿದ್ಯಾ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply