ಧಾರ್ಮಿಕ ನಂಬಿಕೆಗೆ ಘಾಸಿ~ಪಾಠ ಕೈ ಬಿಡಲು ಸಚಿವರ ಆದೇಶ  

ಕರ್ನಾಟಕದ ಪ್ರಾಥಮಿಕ ಶಾಲೆಗಳ 6ನೇ ತರಗತಿಯ ಸಮಾಜಶಾಸ್ತ್ರದ ಪಠ್ಯದಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ವಿಡಂಬನೆ ಮಾಡುವ ವಿಷಯ ಪ್ರಕಟ ವಾಗಿತ್ತು. ‌ಈ ಬಗ್ಗೆ ಕಳೆದ ಒಂದು ವಾರ ದಿಂದ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗಳು ನಡೆಯುತಿತ್ತು.
ಇದನ್ನರಿತ ಉಡುಪಿಯ ಪರ್ಯಾಯ ಶ್ರೀ ಅದಮಾರು ಮಠಾಧೀಶ, ರಾಜ್ಯದ ಪ್ರತಿಷ್ಢಿತ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಆಗಿರುವ ಶ್ರೀ ಈಶಪ್ರಿಯತೀರ್ಥ ಶ್ರೀಪಾದ ರು ವಿಷಾದ ವ್ಯಕ್ತಪಡಿಸಿ ಧ್ವನಿ ಸಂದೇಶ ವೊಂದನ್ನು ಮಾನ್ಯ ಪ್ರಾಥಮಿಕ‌ ಮತ್ತು ಪ್ರೌಢ ಶಿಕ್ಷಣ ಮಂತ್ರಿಗಳಾದ ಎಸ್ ಸುರೇಶ್ ಕುಮಾರ್ ಅವರಿಗೆ ಕಳುಹಿಸಿ ಈ ಬಗ್ಗೆ ಗಮನ ಹರಿಸುವಂತೆ ಅಪೇಕ್ಷೆ ವ್ಯಕ್ತಪಡಿಸಿದ್ದರು .
ಇದನ್ನು ಗಮನಿಸಿದ ಸುರೇಶ್ ಕುಮಾರ್ ಕೇವಲ ಐದು ನಿಮಿಷಗಳಲ್ಲಿ ಸ್ಪಷ್ಟನೆಯ ಧ್ವನಿ ಸಂದೇಶವೊಂದನ್ನು (voice message) ಶ್ರೀಗಳವರಿಗೆ ಮತ್ತು ಜನತೆಗೆ ಕಳುಹಿಸಿ ವಿವಾದಕ್ಕೆ ಇತಿಶ್ರೀ ಹಾಡಿದರು.
 
 
 
 
 
 
 
 
 

Leave a Reply