ವಾರ್ಡಿಗೊಂಡು ಕಾಡು~ಕೊಡವೂರು ಪರಿಸರದ ಬೀಡು

ಕಾಂಕ್ರೀಟ್ ಯುಗದಲ್ಲಿ ಎಲ್ಲಿ ನೋಡಿದರೂ ಸಿಮೆಂಟಿನ ಕಟ್ಟಡದ ಕಾಡುಗಳೇ ತುಂಬಿದೆ . ನಾವು ಅಭಿವೃದ್ಧಿ ಆಗಿದ್ದೇವೆ ಎಂಬ ಭ್ರಮೆಯಲ್ಲಿ ಇದ್ದೇವೆ. ಸದಾ ಬಿಸಿ ಏರುತ್ತಿರುವ ತಾಪಮಾನಕ್ಕೆ ಬಲಿಯಾಗುತ್ತಾ ಪುನಃ ಪುನಃ ಮರ ಕಡಿಯುತ್ತಿದ್ದೇವೆ. ಮರ ನೆಡಲು ನಗರ ಪ್ರದೇಶದಲ್ಲಿ ಜಾಗದ ಕೊರತೆ ಇದೆ . ಸರಕಾರದಿಂದ ಜಾಗ ಸಿಕ್ಕಿದರೆ ಸಾಕು, ನಾವು ಕಟ್ಟಡ ಮಾಡುತ್ತೇವೆ. ಅದುವೇ ಅಭಿbವೃದ್ಧಿ, ಎಂಬ ಭಾವನೆ ಜನ ಸಾಮಾನ್ಯರಿಗಿದೆ .

ಒಂದು ವಾರ್ಡ್ಗೆ ಒಂದು ಕಾಡು ಬೆಳಸಬೇಕು. ಅದು ಶುದ್ಧವಾದ ಗಾಳಿಯನ್ನು ಮತ್ತು ಅಂತರ್ಜಲ ವೃದ್ಧಿ ಮಾಡುತ್ತದೆ. ಭೂಮಿ ಯನ್ನು ತಂಪಾಗಿರಿಸುತ್ತದೆ. ಇದೇ ನಮ್ಮ ಮುಂದಿನ ಜನಾಂಗಕ್ಕೆ ಕೂಡುಗೆಯಾಗ ಬೇಕೆಂದು ನಗರಸಭಾ ಸದಸ್ಯ ಕೆ ವಿಜಯ ಕೊಡವೂರು ಇವರು ವಾರ್ಡಿನ ಗರ್ಡೆ ಶಿವಾಜಿನಗರದಲ್ಲಿ ಒಂದು ವಾರ್ಡಿಗೆ “ಗ್ರಾಮ ವನ~ ರಾಮ ವನ” ಎಂಬ ವಿನೂತನ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖ ರಾದ ಶ್ರೀನಿವಾಸ್ ನಾಯ್ಕ್, ಸಂಚಾಲಕರಾದ ರವಿ ಸಾಲಿಯಾನ್ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ಶಾರೀರಿಕ ಪ್ರಮುಖ ಶಶಾಂತ್, ಹಾಗೂ ಉಡುಪಿ ಜಿಲ್ಲಾ ಗ್ರಾಮ ವಿಕಾಸ್ ಪ್ರಮುಖ್ ಜಯಂತ್ ಪಡುಕರೆ ಸಮಯೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಠಲ್ ಗರ್ಡೆ, ಬೂತ್ ಪ್ರಮುಖ್ ನವೀನ್ ಗರ್ಡೆ, ಮಂಜುನಾಥ್, ಪ್ರತೀಶ್, ವಿನಯ್, ಸತೀಶ್, ಕಾರ್ತಿಕ್, ರಘುರಾಮ್, ಸದಾಶಿವ, ಪ್ರತ್ವಿನ್, ಯತೀಶ್, ಶ್ರೇಯಸ್, ಗಣೇಶ್ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply