ಸಿಂಗಾಪುರ ಎಂಬ ಮಾಯಾಲೋಕ~ ಪೂರ್ಣಿಮಾ ಜನಾರ್ದನ ಕೊಡವೂರು

Singapore, Singapore - December 22, 2013: The Merlion fountain lit up at night in Singapore.
 ಚಿಕ್ಕದಾದರೂ ಚೊಕ್ಕ ದೇಶ ಸಿಂಗಾಪುರ. ಈ ರಾಷ್ಟ್ರದೊಳಗೆ ಕಾಲಿಟ್ಟೊಡನೆ ನಮಗೆ ಖುಷಿ ತರುವದು ಇಲ್ಲಿನ ಸುತ್ತಲಿನ  ಹಸಿರು ಪ್ರಕೃತಿ ಯೊಂದಿಗೆ ಸ್ಪರ್ಧೆಗೆ ನಿಂತಂತಹ ದೊಡ್ಡ ದೊಡ್ಡ ಮಹಡಿಗಳು. ಮಹಡಿಯೊಳಗೆ ಹಸಿರೋ, ಹಸಿರೊಳಗೆ ಮಹಡಿಯೋ ಎಂಬಂತೆ ಎಲ್ಲ ಕಡೆ ಬಹು ಮಹಡಿಗಳ ಸಾಲು ಸಾಲು, ಮಧ್ಯ ಮಧ್ಯ ಹಸಿರಿನ ತೋರಣದಂತೆ ಪ್ರಕೃತಿ ಅಲಂಕರಣ. 
ಒಂದೆಡೆ ಎರಡು ನಿಮಿಷಗಳಿಗೊಮ್ಮೆ ಕಣ್ಮುಚ್ಚಿ ತೆರೆಯುವುದರೊಳಗೆ ಸಾಗುವ ಸ್ವಯಂಚಾಲಿತ ಬೃಹತ್ ಮೆಟ್ರೋ ಗಳು, ಕಂಡಕ್ಟರ್ ಡ್ರೈವರ್ ರವರ ಗೋಜಿಲ್ಲದೆ, ಟಿಕೆಟ್ ನಲ್ಲಿ ಮೋಸವಿಲ್ಲದ ಕ್ಯಾಶ್ ಲೆಸ್ ಕಾರ್ಡುಗಳು, ಚಾಲಕನೊಬ್ಬನೇ ಸಂಭಾಳಿ ಸುವ ಡಬಲ್ ಡೆಕ್ಕರ್ ಬಸ್ ಗಳು, ಮಾರ್ಗ ಬದಿ ಉಗುಳದ,  ಸೀನದ, ರಸ್ತೆ ಬದಿ ಮನುಷ್ಯ ಇಲ್ಲವೇ ಪ್ರಾಣಿಗಳ ಬಹಿರ್ದೆಸೆಗಳ ಕಾಟವಿಲ್ಲದ  ಸ್ವಚ್ಛ ಸುಂದರ ರಸ್ತೆಗಳು. 
ಎಲ್ಲವೂ ಹೀಗೆಯೇ, ಇದೇ ರೀತಿ ಎಂದು ಕರಾರುವಕ್ಕಾಗಿ ನಡೆಯುತ್ತಿರುವ ರಸ್ತೆಯಲ್ಲಿ ಹೋಗುವ ಬರುವ ಪ್ರಕ್ರಿಯೆಗಳು. ಹೌದು  ಸಿಂಗಾಪುರ ಎಲ್ಲರೂ ಮೆಚ್ಚುವಂತಹ ದೇಶ ಎಂಬುದಕ್ಕೆ ಎರಡು ಮಾತಿಲ್ಲ. ಪ್ರಕೃತಿಯ ಆಹ್ಲಾದವನ್ನು ಆಸ್ವಾದಿಸುವ ಪ್ರಕೃತಿ ಪ್ರಿಯರಿಗೆ ಮಾತ್ರವಲ್ಲ ಆಧುನಿಕತೆಯ ಆಹ್ವಾನಿಸುವವರಿಗೂ ಕೂಡ ಈ ದೇಶ ಆಪ್ತವಾಗುತ್ತದೆ‌. 
ಇಲ್ಲಿರುವ ಹತ್ತು ಹಲವು ವೈಶಿಷ್ಟ್ಯ ಪೂರ್ಣ ಪ್ರೇಕ್ಷಣೀಯ ಸ್ಥಳಗಳು, ಆಟವಾಡಲು ಸುಸಜ್ಜಿತ ಪಾರ್ಕ್, ಪೀಠೋಪ ಕರಣಗಳು, ಎಲ್ಲಾ ವಯಸ್ಸಿನವರಿಗೆ ಉಪಯೋಗ ವಾಗುವಂತೆ   ವಾಕಿಂಗ್ ಟ್ರ್ಯಾಕ್, ಉಚಿತ ಫಿಟ್ ನೆಸ್ ಉಪಕರಣಗಳು , ಕುಳಿತು ಕೊಂಡು ಕನಸು ಕಾಣಲು, ನೆಚ್ಚಿನ ಪುಸ್ತಕ ಓದಲು , ಆಚೆ ಈಚೆ ಓಡಾಡುವ  ಚಿತ್ರ ವಿಚಿತ್ರ ಜನರ ಗಮನಿಸಲು,  ಮಕ್ಕಳ ಆಟ ಕಂಡು ಮುದಗೊಳ್ಳಲು, ಬೃಹತ್ ವಿಚಿತ್ರ ವಿನ್ಯಾಸದ ಕಲ್ಲು ಹಾಸುಗಳೊಂದಿಗೆ ತಂಪು ಹಸಿರಿನ ಹೊದಿಕೆ ಹೊದಿಸಿದ  ತಂಗಾಳಿ ಬೀಸಿ ಕರೆವ ತಂಗುದಾಣಗಳ  ಚೆಂದವೇ ಚೆಂದ.
ಇಲ್ಲಿ ಇನ್ನೊಂದು ವಿಶೇಷತೆ ಎಂದರೆ ಸಾಧಾರಣ ಸಿಂಗಾಪುರದ  85% ಸ್ಥಳಗಳು ಪೂರ್ತಿಯಾಗಿ ಸಿಸಿ ಕ್ಯಾಮರಾದ ಕಣ್ಗಾವ ಲಲ್ಲಿದ್ದು ಕಾನೂನು, ನಿಯಮ  ತಪ್ಪಿ ನಡೆದರೆ ಸುಮಾರು ಒಂದು ಸಾವಿರ ಡಾಲರ್ ( ಅಂದರೆ 60 ಸಾವಿರ) ದಂಡ ಮಾಮೂಲಿ. ಹಾಗಾಗಿ ಪ್ರತಿಯೊಬ್ಬರೂ  ಎಚ್ಚರಿಕೆಯಿಂದ ಇಲ್ಲಿ ಬದುಕು ಸಾಗಿಸುತ್ತಾರೆ. ಮೆಟ್ರೋ , ಬಸ್,  ಮಾರ್ಗ ಬೇರೆಯೆ ಇದ್ದು ನಡೆ ದಾಡಲು ಪಾದಚಾರಿಗಳಿಗೆ ಹಾಗೂ ಸೈಕಲ್ ಸವಾರರಿಗೆ ಬೇರೆ ದಾರಿ ಇದ್ದು  ಅಲ್ಲಲ್ಲಿ ಸೂಚನಾ ಫಲಕಗಳು ನಮ್ಮನ್ನು ಎಚ್ಚರಿ ಸುತ್ತಲಿರುತ್ತವೆ.
ರಸ್ತೆ ದಾಟಲು ಹತ್ತು ಹಲವು ವಾಹನ ಗಳಿದ್ದರೂ ಪಾದ ಚಾರಿಗಳಿಗೆಂದೇ  ಇರುವ ಬೇರೆ ಸಿಗ್ನಲ್ ಒತ್ತಿ ಹಸಿರು ದೀಪ ಬಂದ ಬಳಿಕ ಆರಾಮವಾಗಿ ರಸ್ತೆ ದಾಟಬಹುದು.
ಪ್ರತಿಯೊಂದು ಸ್ಥಳದಲ್ಲೂ ಅಚ್ಚುಕಟ್ಟತನ, ಸ್ವಚ್ಛತೆ ಯೊಂದಿಗೆ ಅದನ್ನು ನಿರ್ಮಾಣ ಮಾಡುವಲ್ಲಿನ ಅವರ ಚಾಕಚಕ್ಯತೆಯನ್ನು ಕಂಡಾಗ ನಮೋ ಎನ್ನುವ ಮನಸ್ಸಾಗುತ್ತದೆ. ನಾವು ಕಂಡರಿಯದ, ಕೇಳರಿಯದ ಕನಸ ಲ್ಲೂ ಯೋಚನೆಗೆ  ನಿಲುಕದ ವಿಶಿಷ್ಟ ವಿಸ್ಮಯ ವೈಶಿಷ್ಟ್ಯ ಪೂರ್ಣ ಪ್ರವಾಸಿ ಸ್ಥಳ ಗಳು ಇಲ್ಲಿವೆ.
ಪ್ರಪಂಚದ ಪಕ್ಷಿಗಳ ಸಮುದಾಯವೇ ಇಲ್ಲಿ ಕಾಣಬಹುದಾದ ಜುರಾಂಗ್ ಪಾರ್ಕ್,  ಅಪರೂಪದ ಪ್ರಾಣಿಗಳ,  ಬಣ್ಣ ಬಣ್ಣದ ಮೀನುಗಳನ್ನೊಳಗೊಂಡ ಮಾಂಡೈ ವೈಲ್ಡ್ ಲೈಫ್ , ಮೈ ನವಿರೇಳಿಸುವ ಅಮೆಜಾನ್ ರಿವರ್ ಡ್ರೈವ್,   ಸಿಂಗಾಪುರದ ಹೆಗ್ಗುರುತು ವಿಶ್ವ ವಿಖ್ಯಾತ  ಮರ್ಲಯನ್ ಸ್ಟ್ಯಾಚೂ, ಜಗತ್ತಿನ ಹೂತೋಟವೇ ಇಲ್ಲಿ ಆವಿರ್ಭವಿ ಸಿದಂತಹ ವಿಶಿಷ್ಟ ವಿಸ್ಮಯ ಹೂಗಳ ಲೋಕದ ಗಾರ್ಡನ್ ಬೈ ದ ಬೇ, ಕೃತಕ ಜಲಪಾತದಿಂದ ಖ್ಯಾತಿವೆತ್ತ ಜುವೆಲ್ , ಅಬ್ಬಾ ಏನುಂಟು ಏನಿಲ್ಲ….
ಪ್ರತಿಯೊಂದು ವಿಷಯದಲ್ಲೂ ನಮ್ಮನ್ನು ಸೆಳೆಯುವ ಈ ಈ ಮಾಯಾ ನಗರ ಸುಪ್ರಸಿದ್ಧ ಪ್ರವಾಸಿ ತಾಣವಾಗಿ ನಮ್ಮನ್ನು ಸೆಳೆದರೂ  ದೀರ್ಘಕಾಲದ ವಾಸ್ತವ್ಯ ಮಾತ್ರ ಭಾವನಾ ಜೀವಿಗಳಿಗೆ ಕಷ್ಟ ಸಾಧ್ಯ. ಗಗನ ಚುಂಬಿ ಕಟ್ಟಡಗಳಲ್ಲಿ ನಾಲ್ಕು ಹೆಜ್ಜೆ ಅಂತ ರದ  ಮನೆಗಳಲ್ಲಿ ವಾಸ್ತವ್ಯ ಇದ್ದರೂ ಒಬ್ಬರ ನ್ನೊಬ್ಬರು ಮಾತನಾಡಿಸುವುದೇ ಕಡಿಮೆ. 
ಅದರಲ್ಲೂ ಗಿಜಿಗುಡುತ್ತಿರುವ ಪ್ರವಾಸಿ ತಾಣಗಳಲ್ಲಿ ಒಬ್ಬರ ಮುಖ ಒಬ್ಬರು ನೋಡು ವುದೂ ಇಲ್ಲ. ನಗುವಿನ ಮಾತಂತೂ ಇಲ್ಲವೇ ಇಲ್ಲ. ನಮ್ಮ ಭಾರತೀಯರು ಕಾಣಿಸಿಕ್ಕಾಗ ಲೆಲ್ಲ ಕಣ್ಣರಳಿಸಿ ಮೊಗ ಹಿಗ್ಗಿಸಿ ಹಲ್ಲು ಬಿಟ್ಟರೆ ಬೇರೆ ಪ್ರವಾಸಿಗರು ಆಗ ನಮ್ಮನ್ನು ನೋಡುವ ರೀತಿಗೆ ತಲೆತಗ್ಗಿಸಿ ನಡೆದಾಡುವ ಪರಿಸ್ಥಿತಿ. ಆದರೂ ಜೀವನ ದಲ್ಲೊಮ್ಮೆ ಇಂತಹ ಮಾಯನಗರಿಯನ್ನು ನೋಡ ಬೇಕು,.
ಅಲ್ಲಿನ ಸೌಂದರ್ಯಭರಿತ, ಸುಸಜ್ಜಿತ, ಸೃಜನಾತ್ಮಕ ಸ್ಥಳಗಳನ್ನು ದರ್ಶಿಸಬೇಕು . ಪ್ರಪಂಚ ಸುತ್ತಬೇಕು, ಪುಸ್ತಕ ಓದಬೇಕು ಎಂಬ ಮಾತಿದು ನಿಜ. ಸಿಂಗಾಪುರವೆಂಬ ಮಾಯಾ ಲೋಕವನ್ನು  ಸಂದರ್ಶಿಸಿ ಅಲ್ಲಿನ ವಿಶೇಷ ತಾಣಗಳಿಗೆ  ಭೇಟಿ ನೀಡಿ ಮನಕೆ ಖುಷಿ ಕೊಡುವ  ಆ ಸವಿನೆನಪಿನ ಬುತ್ತಿಯನ್ನು ಆಗಾಗ ತೆರೆದು ಸಂತಸ ಪಡಬೇಕು ಅಲ್ಲವೇ.
ಪೂರ್ಣಿಮಾ ಜನಾರ್ದನ ಕೊಡವೂರು
 
 
 
 
 
 
 
 
 
 
 

Leave a Reply