ಶಿಕ್ಷಕರ ದಿನಾಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಕುತ್ಪಾಡಿ,
ಉಡುಪಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ದಿನಾಂಕ 05/09/2022ರಂದು
ಭಾವಪ್ರಕಾಶ ಸಭಾಂಗಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ
ಕೆ.ವಿ.ಯವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು. ಶ್ರೀ ಧರ್ಮಸ್ಥಳ
ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ, ಉಡುಪಿಯ ವೈದ್ಯಕೀಯ
ಅಧೀಕ್ಷಕರಾದ ಡಾ. ನಾಗರಾಜ್ ಎಸ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.
ವೀರಕುಮಾರ ಕೆ., ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ
ಸಹಪ್ರಾಧ್ಯಾಪಕರಾದ ಡಾ. ವಿದ್ಯಾ ಬಲ್ಲಾಳ್‌ರವರು ವೇದಿಕೆಯಲ್ಲಿ
ಉಪಸ್ಥಿತರಿದ್ದರು.

ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ್ ಬಿ. ನೆಗಳೂರ್‌ರವರು
ಶಿಕ್ಷಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ಕೌಮಾರಭೃತ್ಯ ವಿಭಾಗದ
ನಿವೃತ್ತ ಪ್ರಾಧ್ಯಾಪಕರಾದ ಡಾ. ದೇವಸ್ಯ ನಾರಾಯಣ ಶರ್ಮ ಅವರಿಗೆ
ಸಂಸ್ಥೆಯ ವತಿಯಿಂದ ನೀಡಲಾದ ಸನ್ಮಾನ ಪತ್ರವನ್ನು ವಾಚಿಸಿದರು.
೨೦೨೨ರ ಉತ್ತಮ ಶಿಕ್ಷಕ ಪ್ರಶಸ್ತಿçಯನ್ನು ಪ್ರಸೂತಿತಂತ್ರ ಮತ್ತು
ಸ್ತ್ರೀರೋಗ ವಿಭಾಗದ ಹಿರಿಯ ಸಹಪ್ರಾಧ್ಯಾಪಕರಾದ ಡಾ. ವಿದ್ಯಾ ಬಲ್ಲಾಳ್‌ರವರಿಗೆ
ನೀಡಿ ಗೌರವಿಸಲಾಯಿತು. ಸನ್ಮಾನಿತರಾದ ಡಾ. ವಿದ್ಯಾ ಬಲ್ಲಾಳ್ ಅವರು
ಹಿತವಚನವನ್ನು ನೀಡಿ ಕಾಲೇಜಿನಲ್ಲಿ ಕಳೆದ ಅಪೂರ್ವ ಕ್ಷಣಗಳನ್ನು
ಮೆಲುಕು ಹಾಕಿದರು. ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ
ಸಾಧನೆಗೆ ಕಾರಣೀಭೂತರಾದ ಎಸ್.ಡಿ.ಎಮ್. ಆಯುರ್ವೇದ ಸಂಸ್ಥೆಯ ಘನತೆ,
ಗೌರವದ ಬಗ್ಗೆ ಮಾತನಾಡಿದರು.
ತದನಂತರ ರೋಗನಿದಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪ್ರಸನ್ನ
ಮೊಗಸಾಲೆಯವರು ಶಿಕ್ಷಕ ಡಾ. ದೇವಸ್ಯ ನಾರಾಯಣ ಶರ್ಮ ಅವರ ಕುರಿತು
ಅನುಭವ ಹಂಚಿಕೊoಡರು. ಪ್ರಸೂತಿತಂತ್ರ ಮತ್ತು ಸ್ತ್ರೀರೋಗ
ವಿಭಾಗದ ಮುಖ್ಯಸ್ಥರಾದ ಡಾ. ರಮಾದೇವಿ ಜಿ. ಮತ್ತು ಸಹಾಯಕ
ಪ್ರಾಧ್ಯಾಪಕರಾದ ಡಾ. ಶರೋನ್ ಸೆಬಾಸ್ಟಿಯನ್‌ರವರು ಸನ್ಮಾನಿತರ
ಶುಭಾಶಂಸನೆ ಮಾಡಿದರು.
ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ಮಾತನಾಡಿ
ಸಂಸ್ಥೆಯನ್ನು ಹೊಸ ಎತ್ತರಕ್ಕೆ ಏರಿಸಲು ಶ್ರಮಿಸಿದ ಎಲ್ಲಾ ಶಿಕ್ಷಕರಿಗೆ
ಕೃತಜ್ಞತೆಯನ್ನು ಸಲ್ಲಿಸಿ ಶ್ಲಾಘಿಸಿದರು ಮತ್ತು ಆಯುರ್ವೇದ
ಪರಿಕಲ್ಪನೆಯನ್ನು ಎಲ್ಲರಿಗೂ ತಲುಪಿಸಲು ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ
‘ಒಳ್ಳೆಯ ಮಾತು’ ಗೀತೆಯ ಖಿeಚಿseಡಿ (ಮಾದರಿ ಚಿತ್ರ) ವನ್ನು ಬಿಡುಗಡೆ
ಮಾಡಿದರು.
ಸಮಾರಂಭದ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.
ಮಮತಾ ಕೆ.ವಿ. ಅವರು ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತಾ,
ಶಿಕ್ಷಕರ ಮೌಲ್ಯ ಮತ್ತು ಉತ್ತಮ ಶಿಕ್ಷಕರನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ
ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಕೌಮಾರಭೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕಾವ್ಯ ಸ್ವಾಗತಿಸಿದರು.
ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತೇಜಸ್ವಿ ನಾಯ್ಕ್

ಪ್ರಶಸ್ತಿç ಪುರಸ್ಕöÈತರ ಕಿರು ಪರಿಚಯವನ್ನು ವಾಚಿಸಿದರು. ಶಲ್ಯತಂತ್ರ
ವಿಭಾಗದ ಸಹಪ್ರಾಧ್ಯಾಪಕರಾದ ಡಾ. ರಾಕೇಶ್ ಆರ್.ಎನ್ ಅವರ
ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು
ಮುಕ್ತಾಯಗೊಳಿಸಲಾಯಿತು. ಶಾಲಾಕ್ಯತಂತ್ರ ವಿಭಾಗದ ಸಹಾಯಕ
ಪ್ರಾಧ್ಯಾಪಕಿ ಡಾ. ಸುಷ್ಮಾ ಕಾರ್ಯಕ್ರಮ ನಿರೂಸಿದರು.

 
 
 
 
 
 
 
 
 
 
 

Leave a Reply