ಸರಸ್ವತಿ ವಿದ್ಯಾಲಯ ಸಿದ್ಧಾಪುರ: ‘ಸರಸ್ವತಿ ಮಾತೃಭಾರತಿ’ ರಚನೆ

 ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಪ್ರಕಲ್ಪವಾದ ‘ಮಾತೃಭಾರತಿ’ ಸಮಿತಿಯನ್ನು ಸರಸ್ವತಿ ವಿದ್ಯಾಲಯ ಸಿದ್ಧಾಪುರದಲ್ಲಿ ರಚನೆ ಮಾಡಲಾಗಿದೆ. ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳ ಮಾತೆಯರ ಸಭೆಯಲ್ಲಿ , ಶಾಲೆಯಲ್ಲಿ ಮಾತೃಭಾರತಿ ರಚನೆಯ ಅಗತ್ಯವನ್ನು ಅದರ ಮಹತ್ವವನ್ನು ಶ್ರೀಮತಿ ಸಿಂಧೂ ಐತಾಳ್ ಮಾತಾಜಿ ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ ಇವರು ತಿಳಿಸಿದರು. ಶ್ರೀ ಮಹೇಶ್ ಹೈಕಾಡಿ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇವರು ಮಾತೃಭಾರತಿ ರಚನೆಯನ್ನು ಮಾಡುವುದರಿಂದ ಶಾಲೆಗೆ ಮತ್ತು ಮಾತೆಯರಿಗೆ ಆಗುವ ಪ್ರಯೋಜನ ವನ್ನು , ಮಾತೆಯರು ಸಮಾಜ ಮುಖಿಯಾಗಿ ಚಿಂತಿಸಲು ,ತಮ್ಮ ವ್ಯಕ್ತಿತ್ವದ ಉನ್ನತಿಗೆ ಹೇಗೆ ಸಹಕಾರಿ ಎಂಬುದನ್ನು ತಿಳಿಸುವುದರೊಂದಿಗೆ ಮಾತೃಭಾರತಿ ಭಾರತಿ ಸಮಿತಿಯ ರಚನೆ ಮಾಡಿದರು.

            ಮಾತೃಭಾರತಿ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಮಲ್ಲಿಕಾ ಭಟ್ , ಉಪಾಧ್ಯಕ್ಷರು ಶ್ರೀಮತಿ ಅಮಿತ ಶೆಟ್ಟಿ , ಶ್ರೀಮತಿ ಉಷಾ ಪೈ , ಕಾರ್ಯದರ್ಶಿಯಾಗಿ ಶ್ರೀಮತಿ ಸೌಮ್ಯ ಕಾಮತ್ ಸಹಕಾರ್ಯದರ್ಶಿ ಯಾಗಿ ಶ್ರೀಮತಿ ಉಷಾ ಶೆಟ್ಟಿ , ಶ್ರೀಮತಿ ದೀಪಾ ಆಯ್ಕೆ ಮಾಡಲಾಯಿತು. 

ಶ್ರೀ ಪಾಂಡುರಂಗ ಪೈ ಸಿದ್ಧಾಪುರ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ , ಶ್ರೀ.ದೇವದಾಸ ಪೈ , ರತ್ನಾಕರ ನಾಯಕ್ , ಶ್ರೀಕಾಂತ ನಾಯಕ್ ಉದ್ಯಮಿಗಳು , ಶ್ರೀಮತಿ ಪ್ರಿಯಾ ಮುಖ್ಯೋಪಾಧ್ಯಾಯಿನಿ ಉಪಸ್ಥಿತರಿದ್ದರು. 

             ಸರಸ್ವತಿ ಮಾತೃಭಾರತಿ ಸಮಿತಿಯ ಪದಾಧಿಕಾರಿಗಳು : 

     ಅಧ್ಯಕ್ಷರು: ಶ್ರೀಮತಿ ಮಲ್ಲಿಕಾ ಭಟ್ , ಉಪಾಧ್ಯಕ್ಷರು: ಶ್ರೀಮತಿ ಅಮಿತ ಶೆಟ್ಟಿ , ಶ್ರೀಮತಿ ಉಷಾ ಪೈ , ಕಾರ್ಯದರ್ಶಿ : ಶ್ರೀಮತಿ ಸೌಮ್ಯ ಕಾಮತ್

ಸಹಕಾರ್ಯದರ್ಶಿ : ಶ್ರೀಮತಿ ಉಷಾ ಶೆಟ್ಟಿ , ಶ್ರೀಮತಿ ದೀಪಾ.

ಸದಸ್ಯರು : ನಂದಿತಾ ಪೈ , ಸಹನಾ ಹೆಮ್ಮಣ್ಣ , ಸುಪರ್ಣಾ , ಶೃತಿ , ವಸುಧಾ ಪೈ , ಸುಷ್ಮಾ ಕಾಮತ್ , ರಶ್ಮಿತಾ ನಾಯಕ್, ವನಜಾಕ್ಷಿ , ಶಿಲ್ಪ , ರೇಷ್ಮಾ , ದೀಪಾ , ಅಶ್ವಿನಿ , ಮಂಜುಳಾ , ಪೂರ್ಣಿಮಾ , ಶಾರದಾ , ನಮೃತಾ ಪೈ , ಸುಧಾ ನಾಗರಾಜ. ಶಿಕ್ಷಕಿ ಸೌಭಾಗ್ಯ ಅವರು ಕಾರ್ಯಕ್ರಮ ನಿರ್ವಹಿಸಿದ್ದರು. ಶಿಕ್ಷಕಿ ಚಂದ್ರಕಲಾ ಅವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಪ್ರಶಾಂತ್ .ಪಿ ಐರ್ ಬೈಲು ಸ್ವಾಗತಿಸಿದರು .

 
 
 
 
 
 
 
 
 
 
 

Leave a Reply