ರಾಜ್ಯ ಸರಕಾರಕ್ಕೆ ಅಭಿನಂದನೆ ಮತ್ತು ಆಗ್ರಹ~ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ

ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ರಾಯಣ್ಣನ ನಂದಗಡದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಪಾಲ್ಗೊಂಡರು, ನಂತರ ರಾಯಣ್ಣ ಮತ್ತು ಸುರೇಶ್ ಗೋಕಾಕ್ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಮಾದ್ಯಮದೊಂದಿಗೆ ಮಾತನಾಡಿ, ರಾಜ್ಯ ಸರಕಾರ ಎಲ್ಲಾ ಸರಕಾರಿ ಶಾಲಾ ಕಾಲೇಜು ಮತ್ತು ಸರಕಾರಿ ಕಚೇರಿಗಳಲ್ಲಿ ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಲು ಆದೇಶ ಹೊರಡಿಸುವ ಭರವಸೆ ನೀಡಿದೆ.

ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಮತ್ತು ಸಮಸ್ತ ರಾಯಣ್ಣ ಅಭಿಮಾನಿಗಳ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.

ರಾಯಣ್ಣ ಹುಟ್ಟಿರುವುದು ಹಾಲುಮತ ಸಮುದಾಯದಲ್ಲಿ ಇರಬಹುದು ಆದರೆ ಅವರನ್ನು ಸಮುದಾಯಕ್ಕೆ ಮಾತ್ರ ಸೀಮಿತ ಮಾಡಿ ಅವರ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡದೆ ಅವರ ಸಾಹಸ ಪರಾಕ್ರಮಗಳನ್ನು ಇಡೀ ಕರ್ನಾಟಕದ ಯುವಕರಿಗೆ ತಿಳಿ ಹೇಳುವ ಮೂಲಕ ರಾಯಣ್ಣ ಅಭಿಮಾನಿಗಳ ಬಳಗವನ್ನು ಬಾನೆತ್ತರಕ್ಕೆ ಬೆಳಸಿದ ಶ್ರೀ ಸುರೇಶ್ ಗೋಕಾಕ್ ಅವರನ್ನು ಮುಂದಿನ ದಿನಗಳಲ್ಲಿ ರಾಯಣ್ಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿ ಅವರ ಸೇವೆಯನ್ನು ಪರಿಗಣಿಸಬೇಕು ಎಂದು ಅಭಿಮಾನಿ ಬಳಗದ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗೆ ಪ್ರತಿ ಜಿಲ್ಲೆ ಜಿಲ್ಲೆಗೂ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲು ಆಯಾ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸ್ಥಳಾವಕಾಶ ನೀಡಿ ಆದೇಶ ಹೊರಡಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ್, ಹುಬ್ಬಳ್ಳಿಯ ಸಚಿನ್ ಗಾಣಿಗೇರ, ಯಲ್ಲಪ್ಪ, ರಾಮಣ್ಣ, ಉಡುಪಿಯ ಕುಮಾರ್ ಪ್ರಸಾದ್ , ಈರಪ್ಪ ಗೌಂಡಿ, ವಿಠ್ಠಲ್ ಗೌಡರ್ ಉಪಸ್ಥಿತರಿದ್ದರು.
ರಾಯಣ್ಣನ ಅಪಾರ ಅಭಿಮಾನಿಗಳು ಸರತಿ ಸಾಲಿನಲ್ಲಿ ರಾಯಣ್ಣನ ದರ್ಶನ ಪಡೆದರು, ಮಕ್ಕಳಾಗದವರು ಬಂದು ಹುಟ್ಟಿದರೆ ರಾಯಣ್ಣನಂತಹ ಮಗ ಹುಟ್ಟಲಿ ಎಂದು ಹರಕೆ ಕಾಯಿ ಕಟ್ಟುವುದು ಇಲ್ಲಿನ ವಿಶೇಷವಾಗಿದೆ.
 
 
 
 
 
 
 
 
 
 
 

Leave a Reply