ತಂತ್ರಜ್ಞಾನದ ಬೆಳವಣಿಗೆಯಿಂದ ನೈತಿಕ ಮೌಲ್ಯಗಳಿಗೆ  ಹಾನಿಯಾಗಬಾರದು~ ಡಾ. ಸುನೀತ ವಿ

ತಂತ್ರಜ್ನಾನವನ್ನು ಒಳ್ಳೆಯ ಉದ್ದೇಶಗಳಿಗೆ ಬಳಸಿದರೆ ನೈತಿಕ ನಿಯಮಗಳು ನಮ್ಮ‌ಜೀವನದಲ್ಲಿ ಸುರಕ್ಷಿತವಾಗಿದ್ದು ನಮ್ಮನ್ನು ಸಫಲತೆಯತ್ತ ಕೊಂಡೊಯ್ಯುತ್ತದೆ ಎಂದು ಸರಕಾರಿ ಪ್ರಥಮದರ್ಜೆ ಕಾಲೇಜು, ಕೊಟ ಪಡುಕೆರೆ ಪ್ರಂಶುಪಾಲರಾದ‌ ಡಾ. ಸುನೀತ ವಿ ಅವರು ಪೂರ್ಣಪ್ರಜ್ಞ ಕಾಲೇಜಿನ ಸಮಾಜಶಾಸ್ತ್ರ ವಿಭಾದಿಂದ ಆಯೋಜಿಸಲ್ಪಟ್ಟ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು. ಎಲ್ ಅವರು ತಂತ್ರಜ್ಞಾನ ಅನುಕೂಲತೆಗಳನ್ನು ತಿಳಿದುಕೊಂದು ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಲಬೇಕು ಎಂದು‌ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಶ್ರೀಮತಿ ಶಾಲಿನಿ ಅತಿಥಿಗಳನ್ನು ಪರಿಚಯಿಸಿದರು.

ಊಪನ್ಯಾಸಕರಾದ ಡಾ.ವಿನೊದ್ ಕುಮಾರ್ ಜಿ.ಸಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಕುಮಾರಿ ಚೇತನ  ಪ್ರಾರ್ಥಿಸಿದರು ಶಾರೊನ್ ಕಾರ್ಯಕ್ರಮವನ್ನು ನಿರೂಪಿಸಿದರು. ಚೇತನ ಪೈ ಸ್ವಾಗತಿಸಿ ಸತ್ಯವ್ವ ವಂದಿಸಿದರು.

 
 
 
 
 
 
 
 
 
 
 

Leave a Reply