130 ಅಲ್ಲ ಕೇವಲ 84

ನವದೆಹಲಿ: ತೂಕ ಇಳಿಸಿಕೊಳ್ಳಲು ಹಲವಾರು ಮದಿ ಡಯೆಟ್ ಮಾಡುವುದು, ಜಿಮ್, ವಾಕ್ ಮಾಡುವುದು ಮುಂತಾದವುಗಳನ್ನು ಮಾಡುತ್ತಾರೆ. ಇದಕ್ಕೆ ಸಾಕಷ್ಟು ಪರಿಶ್ರಮವೂ ಅಗತ್ಯ. ಹಾಗೆಯೇ ಕಳೆದ ಎಂಟು ತಿಂಗಳ ಅವಧಿಯಲ್ಲಿ ಬಹಳಷ್ಟು ಶ್ರಮ ವಹಿಸಿ 46 ಕೆ.ಜಿ ತೂಕ ಇಳಿಸಿಕೊಂಡಿದ್ದಕ್ಕಾಗಿ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಪೊಲೀಸ್ ಆಯುಕ್ತರು ಬಹುಮಾನ ನೀಡಿದ್ದಾರೆ.

130 ಕೆ.ಜಿ ತೂಕ ಹೊಂದಿದ್ದ ಮೆಟ್ರೋ ಉಪ ಪೊಲೀಸ್ ಆಯುಕ್ತ ಜಿತೇಂದ್ರ ಮಣಿ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿತ್ತು. ಇದರಿಂದ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು.

ತನ್ನ ಜೀವನಶೈಲಿ ಅಭ್ಯಾಸದಲ್ಲಿ ಸಂಪೂರ್ಣ ಬದಲಾವಣೆಯನ್ನು ಮಾಡಿದ ಅಧಿಕಾರಿ ಪ್ರತಿದಿನ 15,000 ಹೆಜ್ಜೆ ನಡೆಯಲು ಪ್ರಾರಂಭಿಸಿದರು. ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸಿದರು. ರೊಟ್ಟಿ ಮತ್ತು ಅನ್ನದ ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರದ ಬದಲು ಸೂಪ್, ಸಲಾಡ್ ಮತ್ತು ಹಣ್ಣುಗಳಂತಹ ಹೆಚ್ಚು ಪೌಷ್ಟಿಕಾಂಶದ ಆಹಾರ ಸೇವಿಸಲು ಪ್ರಾರಂಭಿಸಿದ್ದಾಗಿ ಅವರು ತಿಳಿಸಿದ್ದಾರೆ.

ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಿ, ಕೇವಲ ಎಂಟು ತಿಂಗಳಲ್ಲಿ ಅವರು ತಮ್ಮ ಸೊಂಟದಿಂದ 12 ಇಂಚುಗಳನ್ನು ಕಡಿಮೆ ಮಾಡಿಕೊಂಡ್ರು. ಪ್ರತಿ ತಿಂಗಳು 4.5 ಲಕ್ಷ ಹೆಜ್ಜೆಗಳನ್ನು ನಡೆಯಲು ಗುರಿಯನ್ನು ಹೊಂದಿದ್ದು, ಕಳೆದ 8 ತಿಂಗಳಲ್ಲಿ 32 ಲಕ್ಷಕ್ಕೂ ಹೆಚ್ಚು ಮೆಟ್ಟಿಲುಗಳನ್ನು ನಡೆದಿರುವುದಾಗಿ ಡಿಸಿಪಿ ಮಣಿ ಹೇಳಿದ್ದಾರೆ. ಪ್ರಸ್ತುತ ಅವರು 84 ಕೆ.ಜಿ ತೂಕ ಹೊಂದಿದ್ದಾರೆ.

90,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದ ಸಮಾರಂಭದಲ್ಲಿ ಪೊಲೀಸ್ ಇಲಾಖೆಯ ಪರವಾಗಿ ಪ್ರಶಂಸಾ ಪತ್ರವನ್ನು ನೀಡಿದ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಅಧಿಕಾರಿಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

 
 
 
 
 
 
 
 
 
 
 

Leave a Reply