ರಾಮ ಮಂದಿರ ​ಸಂಭ್ರಮಕ್ಕೆ ಸಾಥ್ ನೀಡಲಿದೆ ಅಯೋಧ್ಯೆ ರೈಲ್ವೆ ನಿಲ್ದಾಣ~ನೂತನ ರೈಲ್ವೆ ನಿಲ್ದಾಣ​ದ  ನೀಲಿ ನಕ್ಷೆ

ಅಯೋಧ್ಯೆ: ರಾಮ ಮಂದಿರ ನಿರ್ಮಾಣದ ವೇಳೆಯಲ್ಲಿಯೇ ಅಯೋಧ್ಯೆಯಲ್ಲಿ ಹೊಸ ರೈಲ್ವೆ ನಿಲ್ದಾಣದ ಮೊದಲ ಹಂತವು 2021 ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ.​ ಈ ನಿಲ್ದಾಣ ಅಯೋಧ್ಯೆಗೆ ಭೇಟಿ ನೀಡುವ ಪ್ರಯಾಣಿಕರಿಗೆ ರಾಮ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಮಿಸಿದ ರಾಮ ಮಂದಿರ ವೀಕ್ಷಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಪವಿತ್ರ ನಗರದಲ್ಲಿ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಯನ್ನು ಅಂದಾಜು 104.77 ಕೋಟಿ ರೂ. ವೆಚ್ಚವಾಗಲಿದ್ದು. ಉತ್ತರ ರೈಲ್ವೆ ಅನೇಕ ರೈಲುಗಳನ್ನು ಸಿದ್ದಗೊಳಿಸುತ್ತಿದೆ.

ಈ ನಿಲ್ದಾಣವು ಅಯೋಧ್ಯೆಯ ಪ್ರಸ್ತುತ ಮತ್ತು ಭವಿಷ್ಯದ ವಾತಾವರಣವನ್ನು ಗಮನದಲ್ಲಿರಿಸಿಕೊಂಡು ನಿರ್ಮಾಣ ಮಾಡಲಾಗುತ್ತದೆ. ಅಯೋಧ್ಯೆ ರೈಲ್ವೆ ನಿಲ್ದಾಣದಲ್ಲಿ ಉನ್ನತ ದರ್ಜೆಯ ಮೂಲಸೌಕರ್ಯ ಸೌಲಭ್ಯಗಳು, ಪ್ರಯಾಣಿಕರ ಸೌಲಭ್ಯಗಳು, ಸ್ವಚ್ಛತೆ, ಸೌಂದರ್ಯ ಮತ್ತು ಉನ್ನತ-ಗುಣಮಟ್ಟದ ಮಾನದಂಡಗಳೊಂದಿಗೆ ವಿವಿಧ ಅಪೇಕ್ಷಿತ ಸೌಲಭ್ಯಗಳನ್ನು ಒದಗಿಸುವ ದಿಕ್ಕಿನಲ್ಲಿದೆ ಎಂದು ಉತ್ತರ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ರೈಲ್ವೆ ನಿಲ್ದಾಣದ ನಿರ್ಮಾಣ ಕಾರ್ಯಕ್ಕಾಗಿ 2017-18ರ ಆರ್ಥಿಕ ವರ್ಷದಲ್ಲಿ 80 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ನಂತರ ಇದನ್ನು 104.77 ಕೋಟಿ ರೂ.ಗೆ ಹೆಚ್ಚಿಸಲಾಯಿತು.
 
 
 
 
 
 
 
 
 
 
 

Leave a Reply