ಶಿಂಗಾರಗೊಳ್ಳುತ್ತಿದೆ ಅಯೋಧ್ಯೆ,​ದ್ವಿತೀಯ ದಿನದ ಧಾರ್ಮಿಕ ವಿಧಿಗಳು ಆರಂಭ  

​ದ್ವಿತೀಯ ದಿನದ ಧಾರ್ಮಿಕ ವಿಧಿಗಳು ಆರಂಭ. ಸರಯೂ ನದಿ ತೀರ ದೀಪೋತ್ಸವಕ್ಕೆ ಸಿದ್ಧ. ನಾಳೆ ಪ್ರಧಾನಿ ನರೇಂದ್ರ ಮೋದಿಯ ವರಿಂದ ಭೂಮಿ ಪೂಜೆ.​ 
ತಿಹಾಸಿಕ ಮಂದಿರ ನಿರ್ಮಾಣದ ಭೂಮಿಪೂಜೆಯ ಪೂರ್ವಭಾವಿಯಾಗಿ ಇಂದು ಎರಡನೆಯ ದಿನದ ಧಾರ್ಮಿಕ ಆಚರಣೆಗಳು ಆರಂಭವಾಗಿವೆ. ತ್ರೇತಾ ಯುಗದ ರಾಮಾಯಣದ ಘಟಣಾವಳಿಗೆ ಸಾಕ್ಷಿಯಾಗಿರುವ ಸರಯೂ ನದಿಯ ಸುತ್ತಲೂ ದೀಪೋತ್ಸವದ ಸಕಲ ತಯಾರಿಯು ನಡೆಯುತ್ತಿದೆ.
ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆಯನ್ನು ನೆರವೇರಿಸುವ ಮೊದಲು ಅಯೋಧ್ಯೆಯ ಹನುಮಾನ್ ಗರ್ಹಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆಯನ್ನು ನಡೆಸಿ ಬಳಿಕ ಅಯೋಧ್ಯಾ ರಾಮ ಜನ್ಮ ಭೂಮಿಯಲ್ಲಿ​ ರಾಮಲಲ್ಲಾ ಪೂಜೆಯನ್ನು ನೆರವೇರಿಸಿ ಭವ್ಯ ಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನಡೆಸಲಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮಕ್ಕೆ 135 ಮಠಾಧೀಶರು ಮತ್ತು ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ. ಕೊರೊನಾ ಮಾರ್ಗ ಸೂಚಿಗಳ ಅನ್ವಯ ಕಾರ್ಯಕ್ರಮಕ್ಕೆ 175 ಮಂದಿಯನ್ನು ಮಾತ್ರ ಆಹ್ವಾನಿಸಲಾಗಿದೆ. ಭೂಮಿ ಪೂಜೆಗೆ ಯಜಮಾನರಾಗಿ ವಿಹಿಂಪ ಮುಖಂಡ ದಿ. ಅಶೋಕ್ ಸಿಂಘಾಲ್ ಕುಟುಂಬದ ಸದಸ್ಯರನ್ನು ಆಹ್ವಾನಿಸಲಾಗಿದೆ.

Leave a Reply