ಕಲಾವಿದ ಮೋಹನ ಶೆಟ್ಟಿಗಾರರಿಗೆ ಸಮ್ಮಾನ.

ಹಿರಿಯ ಹಿಮ್ಮೇಳವಾದಕ ಮಿಜಾರು ಮೋಹನ ಶೆಟ್ಟಿಗಾರರು ಕಟೀಲು, ಕರ್ನಾಟಕ ಮೇಳವೂ ಸೇರಿದಂತೆ ಸುದೀರ್ಘ ಐದು ದಶಕಗಳ ಕಲಾ ಸೇವೆಗೈದಿದ್ದು ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ದಾಮೋದರ ಮಂಡೆಚ್ಚರಂತಹ ಹಿರಿಯ ಭಾಗವತರಿಗೆ ಸಾಥಿ ನೀಡಿದ ಅನುಭವಿ. ಕಟೀಲು ಮೇಳದಲ್ಲಿ ಕುಬಣೂರು ಶ್ರೀಧರರಾಯರ ಜೊತೆಗಿನ ಕರ್ಣಾನಂದಕರ ಹಿಮ್ಮೇಳದ ನೆನಪಿನಲ್ಲಿ ಅತ್ತೂರು ಉಡುಪ ಸಹೋದರರು-ಸಹೋದರಿಯರ ಪರವಾಗಿ , ನಗದು ಪುರಸ್ಕಾರವೂ ಸೇರಿದಂತೆ ಫಲವಸ್ತು , ಅಭಿನಂದನಾ ಪತ್ರದೊಂದಿಗೆ ದಂಪತಿಗಳನ್ನು ಮಿಜಾರಿನಲ್ಲಿರುವ ಅವರ ಮನೆಯಲ್ಲಿ ಗೌರವಿಸಲಾಯಿತು.

ಕಲಾವಿದ-ಪ್ರೇಕ್ಷಕರ ನಡುವಿನ ಮಧುರ ಸಂಬಂಧಕ್ಕೆ ಇದು ಸಾಕ್ಷಿಯಾಯಿತು. ವೃತ್ತಿಯಲ್ಲಿರುವಾಗಲೂ ಮಾಡುತ್ತಿದ್ದ ಕುಲಕಸುಬು ನೇಕಾರಿಕೆಯನ್ನು ಈಗಲೂ ಪತಿ-ಪತ್ನಿಯರಿಬ್ಬರೂ ದಿನದ ಒಂದಷ್ಟು ಹೊತ್ತು ಮಾಡುತ್ತಿದ್ದಾರೆ. ದಂಪತಿಗಳು ಸಂತೋಷವನ್ನು ಅನುಭವಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ, ಪ್ರಥ್ವಿ ಪ್ರಸಾದ ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply