ಜಪಾನ್ ಮಾಜಿ ಪ್ರಧಾನಿಗೆ ಗುಂಡೇಟು; ಚಿಂತಾಜನಕ ಸ್ಥಿತಿ

ಜಪಾನ್ ಮಾಜಿ ಪ್ರಧಾನಿ ಶೊಂಜೊ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಶುಕ್ರವಾರ ಬೆಳಗ್ಗೆ 8ಗಂಟೆ 29ನಿಮಿಷದಲ್ಲಿ ಅವರು ನಾರಾದ ಬೀದಿಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ  ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರದ ಮೇಲ್ಮನೆ ಚುನಾವಣೆಗೆ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ನಾಯಕ ಸಾರ್ವಜನಿಕವಾಗಿ ಭಾಷಣ ಮಾಡುತ್ತಿದ್ದಾಗ ಗುಂಡೇಟಿನ ಸದ್ದು ಕೇಳಿಬಂದಿದೆ. ಗುಂಡೇಟಿನ ಶಬ್ದ ಕೇಳಿದ ಬೆನ್ನಲ್ಲಿಯೇ ಶಿಂಜೋ ಅಬೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರ ಎದೆಯ ಭಾಗದ ಕಡೆಯಲ್ಲಿ ರಕ್ತ ಕಂಡುಬಂದಿದೆ ಎಂದು ವರದಿಯಾಗಿದೆ.

ಸುದೀರ್ಘ ಅವಧಿ ಜಪಾನ್ ಪ್ರಧಾನಿಯಾಗಿದ್ದ ಅಬೆ, ಆಗಸ್ಟ್ 2020 ರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

 
 
 
 
 
 
 
 
 

Leave a Reply