ಮಿಲಾಗ್ರಿಸ್ ಕಾಲೇಜು: ಎನ್ಎಸ್ಎಸ್ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಯ ಚಾಲನೆ

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಉಡುಪಿ ಇಲ್ಲಿನ ಎನ್ಎಸ್ಎಸ್ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಯ ಚಾಲನೆಯು ದಿನಾಂಕ 24 .11. 2022 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲ್ಪಟ್ಟಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆಯಾದ ಶ್ರೀಮತಿ ಸೋಫಿಯಾ ಡಯಾಸ್ ಇವರು ಎನ್ಎಸ್ಎಸ್ ನ ಧ್ಯೇಯ ಮತ್ತು ಉದ್ದೇಶ ವನ್ನು ಸ್ವಯಂಸೇವಕರಿಗೆ ತಿಳಿಯಪಡಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಲೇಜಿನ ಪಬ್ಲಿಕ್ ರಿಲೇಶನ್ ಆಫೀಸರ್ ಆದ ಶ್ರೀಯುತ ರವಿನಂದನ್ ಭಟ್ ಇವರು ಸ್ವಯಂಸೇವಕರುಗಳಿಗೆ ವ್ಯಕ್ತಿತ್ವ ವಿಕಸನ ,ನಾಯಕತ್ವ ಗುಣ ,ಸೇವಾ ಮನೋಭಾವನೆ ಮತ್ತು ಅನುಭವದ ಕಲಿಕೆ ಯಿಂದ ಚಟುವಟಿಕೆಗಳ ಮಾಹಿತಿಯನ್ನು ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಎಂ ಜೋಗಿ ಮತ್ತು ಡಾ. ಪ್ರಕಾಶ್ ಅನಿಲ್ ಕ್ಯಾಸ್ತಲೀನೋ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಬಿ ಎಸ್ಸಿ ಸ್ವಯಂಸೇವಕೀ ಲಕ್ಷ್ಮಿ ನಿರೂಪಿಸಿ ,ಸ್ನೇಹ ದ್ವಿತೀಯ ಬಿಸಿಎ ಸ್ವಾಗತಿಸಿ ಮತ್ತು ಧನ್ಯವಾದಗೈದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply