ಮೂತ್ರಪಿಂಡ ಕಾಯಿಲೆಯ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮ*

ಮಣಿಪಾಲ, 17ನೇ ಮಾರ್ಚ್ 2022: ವಿಶ್ವ ಮೂತ್ರಪಿಂಡ ದಿನದ ಪ್ರಯುಕ್ತ ಮಾ. 13 ರಂದು ಸರಳಬೆಟ್ಟು ಹೊಸಬೆಳಕು ಆಶ್ರಮದಲ್ಲಿ ಮೂತ್ರಪಿಂಡ ಕಾಯಿಲೆಯ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಮಣಿಪಾಲ್ ಆಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಸಂಸ್ಥೆಯಾದ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (Manipal college of Health Professions- MCHP) ಆರ್. ಆರ್. ಟಿ ಮತ್ತು ಡಿ. ಟಿ. (RRT & DT) ವಿಭಾಗ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕಸ್ತೂರ್ಬಾ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ  ಡಾ. ಶ್ರೀನಿವಾಸ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಮೂತ್ರಪಿಂಡ ಆರೋಗ್ಯದ ಕುರಿತು ಮಾತನಾಡಿ ಅರಿವು ಮೂಡಿಸಿದರು.

ಎಮ್.ಸಿ.ಎಚ್.ಪಿ (MCHP) ಸಹಾಯಕ ಉಪನ್ಯಾಸಕರಾಗಿರುವ ಅಜಿತ್, ಭಾರತಿ, ಶ್ವೇತಾ ಮತ್ತು ಶ್ರಾವ್ಯ ಅವರ ಮಾರ್ಗದರ್ಶನದಲ್ಲಿ 22 ವಿದ್ಯಾರ್ಥಿಗಳು  ಮೂತ್ರಪಿಂಡ ಕಾಯಿಲೆಯ ತಪಾಸಣೆಯನ್ನು ನಡೆಸಿದರು.  ರಕ್ತದೋತ್ತಡ, ರಕ್ತದಲ್ಲಿನ ಸಕ್ಕರೆ ಅಂಶ  ಮತ್ತು ಮೂತ್ರ ತಪಾಸಣೆಯನ್ನು ಉಚಿತವಾಗಿ ಮಾಡಲಾಯಿತು.    ಹೊಸಬೆಳಕು ಆಶ್ರಮದ ಟ್ರಸ್ಟಿ ಆಗಿರುವಂತಹ  ಶ್ರೀಮತಿ ತನುಲಾ ಮತ್ತು ವಿನಯ್ ಅವರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು. ಎಮ್.ಸಿ.ಎಚ್ ಪಿ. (MCHP) ಯ ಸಹಾಯಕ ಉಪನ್ಯಾಸಕಿಯಾಗಿರುವ ಶ್ವೇತಾ ಕಾರ್ಯಕ್ರಮ ಸಂಯೋಜಿಸಿದ್ದರು. ಸಹಾಯಕ ಉಪನ್ಯಾಸಕಿಯಾದ ಭಾರತಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ವೇತಾ ವಂದನಾರ್ಪಣೆಗೈದರು.
 

 
 
 
 
 
 
 
 
 
 
 

Leave a Reply